ಪಜೀರ್ ಗ್ರಾಪಂಗೆ ನ್ಯೂ ಲುಕ್!

Ull_Pajir
Published on

ಅನ್ಸಾರ್ ಇನೋಳಿ, ಉಳ್ಳಾಲ

ಸುಂದರವಾದ ಪ್ರವೇಶ ದ್ವಾರ, ಸುತ್ತಲೂ ಆವರಣ ಗೋಡೆ… ಹಸಿರೀಕರಣ ಯೋಜನೆ ಕಾರ್ಯರೂಪಕ್ಕಿಳಿಸುವ ಮುನ್ನ ಕಾರ್ಯಗತಗೊಂಡ ಪ್ರವೇಶ ದ್ವಾರ ಪಜೀರ್ ಗ್ರಾಮ ಪಂಚಾಯಿತಿ ಕಚೇರಿಯ ಸೌಂದರ್ಯ ಇಮ್ಮಡಿಗೊಳಿಸಿದೆ.

ಹಿಂದೆ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿದ್ದ ಪಜೀರ್ ಗ್ರಾಮ ಪ್ರಸ್ತುತ ಉಳ್ಳಾಲ ತಾಲೂಕು ವ್ಯಾಪ್ತಿಗೆ ಸೇರ್ಪಡೆಗೊಂಡಿದೆ. ಪಂಚಾಯಿತಿ ಕಚೇರಿಯ ಆಸುಪಾಸಿನಲ್ಲೇ ಐಟಿ ಕಂಪನಿ, ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಇದೆ. ಐಟಿ ಕಂಪನಿ ಗ್ರಾಮ ವ್ಯಾಪ್ತಿಯಲ್ಲೇ ಇರುವುದರಿಂದ ಆದಾಯಕ್ಕೂ ಬಲ ಬಂದಿದೆ.

ಗ್ರಾಮದಲ್ಲಿರುವ ಮನೆ, ವ್ಯಾಪಾರಿ ಮಳಿಗೆಗಳ ತೆರಿಗೆ, 15ನೇ ಹಣಕಾಸು ಯೋಜನೆ ಎಲ್ಲವೂ ಸೇರಿ ಗ್ರಾಮ ಪಂಚಾಯಿತಿಗೆ ವಾರ್ಷಿಕ 85ರಿಂದ 90 ಲಕ್ಷ ರೂ. ಆದಾಯ ಇದೆ. ಜನ ಗುರುತಿಸಲ್ಪಡುವ ಜಾಗದಲ್ಲೇ ಪಂಚಾಯಿತಿ ಕಚೇರಿಯೂ ಇದೆ. ಗ್ರಾಮ ಪಂಚಾಯಿತಿ ಎಂದರೆ ಸ್ಥಳೀಯ ಸರ್ಕಾರ ಇದ್ದಂತೆ. ಪಂಚಾಯಿತಿ ಕಚೇರಿ ಸುಂದರ, ಆಕರ್ಷಕವಾಗಿದ್ದರೆ ಗ್ರಾಮದ ಅಭಿವೃದ್ಧಿಯನ್ನೂ ಅಳೆಯಬಹುದಾಗಿದೆ. ಗ್ರಾಮಸ್ಥರಿಗೂ ಪಂಚಾಯಿತಿ ಕಚೇರಿಗೆ ಹೋಗಲು ಹುಮ್ಮಸ್ಸು ಬರುತ್ತದೆ. ಈ ಹಿನ್ನೆಲೆಯಲ್ಲಿ ಕಚೇರಿಗೆ ಲುಕ್ ಕೊಡಬೇಕೆಂದು ಯೋಚಿಸಿದ ಆಡಳಿತಗಾರರು ಯೋಜನೆ ಕಾರ್ಯರೂಪಕ್ಕಿಳಿಸಿದ್ದಾರೆ.

ಹಸಿರೀಕರಣದ ಮುನ್ನ

ಪಂಚಾಯಿತಿ ಆವರಣದಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಗ್ರಂಥಾಲಯ, ನ್ಯಾಯ ಬೆಲೆ ಅಂಗಡಿ, ಭಾರತ್ ನಿರ್ವಾಣ್ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡವೂ ಇದೆ. ಆವರಣಗೋಡೆ ಇತ್ತಾದರೂ ಗೇಟಿನ ವ್ಯವಸ್ಥೆ ಇಲ್ಲದ ಕಾರಣ ಅಂಗಳ ಬರಡಾಗಿದೆ. ಅಂಗಳದಲ್ಲಿ ವೃಂದಾವನ, ಸುತ್ತಲೂ ಗಿಡಗಳನ್ನು ನೆಡಬೇಕೆನ್ನುವುದು ಗ್ರಾಮಸ್ಥರ ಆಗ್ರಹವಾಗಿದ್ದು, ಜನಪ್ರತಿನಿಧಿಗಳ ಅಭಿಲಾಷೆಯೂ ಆಗಿದೆ. ಈ ಯೋಜನೆ ಕಾರ್ಯರೂಪಗೊಂಡರೆ ನೆಟ್ಟ ಗಿಡಗಳು, ವೃಂದಾವನ ಎಲ್ಲವೂ ಸಾಕು ಪ್ರಾಣಿಗಳ ಪಾರಾಗುವುದನ್ನು ತಪ್ಪಿಸಬೇಕು. ಅಗತ್ಯವಿರುವಲ್ಲಿ ಇಂಟರ್‌ಲಾಕ್ ಅಳವಡಿಕೆ, ನೂತನ ಧ್ವಜಸ್ತಂಭ ನಿರ್ವಾಣದ ಜತೆಗೆ ಪ್ರವೇಶ ದ್ವಾರವೂ ಸುಂದರವಾಗಿ ಜನರನ್ನು ಆಕರ್ಷಿಸಬೇಕು ಎಂದು ಬಯಸಿದ ಪಂಚಾಯಿತಿ ಆಡಳಿತಗಾರರು ಅಂಗಳ ಹಸಿರೀಕರಣಕ್ಕೆ ಮುನ್ನ ಭದ್ರತೆಗೆ ಮೊದಲ ಆದ್ಯತೆ ನೀಡಿದ್ದಾರೆ.

ಪಂಚಾಯಿತಿ ಎದುರು ವೃಂದಾವನ ನಿರ್ಮಿಸುವ ಜತೆ ಹಸಿರೀಕರಣ ವಾಡಲು ಯೋಚಿಸಲಾಗಿದೆ. ಅದೆಲ್ಲಾ ವಾಡುವ ಮೊದಲು ಆವರಣ ಗೋಡೆ, ಪ್ರವೇಶ ದ್ವಾರ ನಿರ್ಮಿಸಲಾಗಿದ್ದು, ಈ ಮೂಲಕ ಪಂಚಾಯಿತಿ ಕಚೇರಿ ಸಾರ್ವಜನಿಕರನ್ನು ಆಕರ್ಷಿಸುವಂತೆ ವಾಡುವ ಉದ್ದೇಶ ಹೊಂದಲಾಗಿದೆ. ಮೊಹಮ್ಮದ್ ರಫೀಕ್, ಅಧ್ಯಕ್ಷರು, ಪಜೀರ್ ಗ್ರಾಮ ಪಂಚಾಯಿತಿ

ಮೊಹಮ್ಮದ್ ರಫೀಕ್, ಅಧ್ಯಕ್ಷರು, ಪಜೀರ್ ಗ್ರಾಮ ಪಂಚಾಯಿತಿ

ಗ್ರಾಮ ಪಂಚಾಯಿತಿ ಎಂದರೆ ಗ್ರಾಮ ಸರ್ಕಾರ. ಇಲ್ಲಿಗೆ ಗ್ರಾಮಸ್ಥರು ವಾತ್ರವಲ್ಲದೆ ಹೊರಗಿನವರೂ ಬರುತ್ತಾರೆ. ಹೀಗಿರುವಾಗ ಪಂಚಾಯಿತಿ ಆವರಣ ಆಕರ್ಷಕವಾಗಿರಬೇಕು. ಪಜೀರ್ ಪಂಚಾಯಿತಿ ಕಚೇರಿಯ ಆಕರ್ಷಣೆ ಹೆಚ್ಚಿದ್ದು, ಆಡಳಿತಗಾರರ ಕಾರ್ಯ ಶ್ಲಾನೀಯ. ಪುಷ್ಪರಾಜ್ ಆರ್.ಶೆಟ್ಟಿ, ಪಜೀರ್ ಗ್ರಾಮಸ್ಥ

ಪುಷ್ಪರಾಜ್ ಆರ್.ಶೆಟ್ಟಿ, ಪಜೀರ್ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net