

ಉಳ್ಳಾಲ: ನವೆಂಬರ್ 24ರಂದು ಕುತ್ತಾರು ಸೌಹಾರ್ದ ಕಲಾವಿದರು, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ, ಮುನ್ನೂರು ಯುವಕ ಮಂಡಲ, ಶ್ರೀ ಜೈ ವೀರಾಂಜನೇಯ ವ್ಯಾಯಮ ಶಾಲೆ ಆಶ್ರಯದಲ್ಲಿ ನಡೆಯಲಿರುವ ಮುನ್ನೂರು ಗ್ರಾಮಡೊಂಜಿ ಗೌಜಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮುನ್ನೂರು ಯುವಕ ಮಂಡಲದಲ್ಲಿ ನಡೆಯಿತು.
ಸ್ವಾಗತ ಸಮಿತಿ ಅಧ್ಯಕ್ಷ ರಘುಪತಿ ಡಿ. ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಗೌರವ ಸಲಹೆಗಾರರಾದ ರವೀಂದ್ರನಾಥ ಪೂಂಜ, ಫಾ.ಜಯಪ್ರಕಾಶ್ ಡಿಸೋಜ, ಕೃಷ್ಣಪ್ಪ ಸಾಲ್ಯಾನ್, ಬಾಲಕೃಷ್ಣ ಸಾಲ್ಯಾನ್ ಕಂಪ, ರತ್ನಾಕರ ಕಾವ, ದಯಾನಂದ ಪಿ.ಎಸ್., ಮುನ್ನೂರು ಗ್ರಾಪಂ ಉಪಾಧ್ಯಕ್ಷ ಮಹಾಬಲ ಟಿ.ದೆಪ್ಪೆಲಿಮಾರ್, ಮುನ್ನೂರು ಗ್ರಾಪಂ ಅಧ್ಯಕ್ಷೆ ಐಸಮ್ಮ, ಗೀತಾ ಸಲ್ದಾನ, ಹರೀಶ್ ಮುಂಡೋಳಿ, ಚಂದ್ರಹಾಸ್ ಡಿ., ಮಿಥುನ್ ರಾಜ್ ಕಂಪ, ಜಯರಾಮ್ ಕುತ್ತಾರು, ಪಂಚಾಯಿತಿ ಸದಸ್ಯರಾದ ಸಿರಾಜ್, ಗಣೇಶ್ ಅಡ್ಯಂತಾಯ, ವರದರಾಜ್ ಕೊಟ್ಟಾರಿ, ಶ್ರೀಧರ್ ಸಾಲ್ಯಾನ್, ಶಶೀಂದ್ರ ಕುಕ್ಯಾನ್ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಜೀವನ್ ರಾಜ್ ಕುತ್ತಾರು ಸ್ವಾಗತಿಸಿದರು. ಕೋಶಾಧಿಕಾರಿ ಪೃಥ್ವಿರಾಜ್ ಕಬೆಕೋಡಿ ವಂದಿಸಿದರು.