ಕೆರೆಕಾಡಿನಲ್ಲಿ ಆನೆಕಾಲು ರೋಗ ಪರೀಕ್ಷೆ

Kin_Shibira
Published on

ಕಿನ್ನಿಗೋಳಿ: ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು, ಕೆವ್ರಾಲ್ ಮತ್ತು ಕಿಲ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಅಕ್ಷಯ ಮಹಿಳಾ ಮಂಡಳಿ ಕೆರೆಕಾಡು ಆಶ್ರಯದಲ್ಲಿ ಕೆರೆಕಾಡು ಗಣೇಶ ಕಟ್ಟೆಯ ಬಳಿ ಶ್ರೀ ಕಷ್ಣ ಕುಟೀರದ ವಠಾರದಲ್ಲಿ ಆನೆಕಾಲು ರೋಗದ ರಕ್ತಪರೀಕ್ಷೆ, ಬಿ.ಪಿ. ಹಾಗೂ ಶುಗರ್ ತಪಾಸಣಾ ಶಿಬಿರ ನಡೆಯಿತು.

ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಕಾಸ್ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಕಿಲ್ಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಅಕ್ಷಯ ಮಹಿಳಾ ಮಂಡಳಿ ಅಧ್ಯಕ್ಷೆ ಲಲಿತಾ ಭಾಸ್ಕರ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸುವಾ, ಆಶಾ ಕಾರ್ಯಕರ್ತೆಯರು, ಭಾಸ್ಕರ್ ಶೆಟ್ಟಿಗಾರ್, ವಾಧವ ಶೆಟ್ಟಿಗಾರ್, ಸಂದೀಪ್ ಕುವಾರ್, ರತ್ನಾ ಶಿವಾನಂದ ಕೋಟ್ಯಾನ್ ಹಾಗೂ ಅಕ್ಷಯ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net