

ಹೆಬ್ರಿ: ಕಬ್ಬಿನಾಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನೂತನ ಶಿಲಾಮಂಟಪದಲ್ಲಿ ನಾಗದೇವರ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾಗುಡಿಯಲ್ಲಿ ರಾಹುದೈವದ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಕೆ.ಎಸ್.ರಾಮಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ಅರ್ಚಕ ಲಕ್ಷ್ಮೀಶ ಭಾರದ್ವಾಜ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಶುಕ್ರವಾರ ನೂತನ ಶಿಲಾಮಯ ಗುಡಿಯಲ್ಲಿ ಕಾಳ ರಾಹುವಿನ ಹೊಸ ಬಿಂಬ ವಿರಾಜಮಾನವಾಯಿತು. ಪುಣ್ಯಹಾ ಪಂಚಗವ್ಯ ಪೂವಾರ್ಂಗ ಪ್ರತಿಕ್ರಿಯೆ, ಪ್ರಾಯಶ್ಚಿತ ಹೋಮಗಳು, ವೃಷಭ ಲಗ್ನದಲ್ಲಿ ಬಿಂಬ ಚೈತನ್ಯಾವಾಹನೆ, ಪ್ರತಿಜ್ಞಾವಿಧಿ, ಪಂಚಾಮೃತ ಪ್ರಧಾನ ಕಲಶಾಭಿಷೇಕ, ಆಶ್ಲೇಷ ಬಲಿ, ಸತ್ಯದೇವತೆ ಸನ್ನಿಧಿಯಲ್ಲಿ ದುರ್ಗಾಹೋಮ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ನಾಗಕನ್ನಿಕಾ ವಟು ಆರಾಧನೆ, ಸುಹಾಸಿನಿ ಆರಾಧನೆ, ಅನ್ನ ಸಂತರ್ಪಣೆ, ಧಾರ್ಮಿಕ ಸಭೆ, ದೀಪಾರಾಧನೆ, ಕುಣಿತ ಭಜನೆ, ರಂಗಪೂಜೆ ಜರುಗಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಸದಸ್ಯರಾದ ಕೆ.ನಾರಾಯಣ ಭಟ್, ಚಂದ್ರಶೇಖರ ಬಾಯಾರಿ, ಯೋಗೇಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಜಗದೀಶ, ಶೇಖರ್ ಗೌಡ, ರೇಣುಕಾ ಶೆಟ್ಟಿಗಾರ್, ಗಾಯತ್ರಿ ಮಡಿವಾಳ ಉಪಸ್ಥಿತರಿದ್ದರು.