ಮಣೂರು ದೇಗುಲ ವಾರ್ಷಿಕ ಜಾತ್ರೆಗೆ ಚಾಲನೆ

manur
Published on

ಕೋಟ: ಇಲ್ಲಿನ ಮಣೂರು ಶ್ರೀ ಮಹಾಲಿಂಗೇಶ್ವರ ಶ್ರೀ ಹೇರಂಭ ಮಹಾಗಣಪತಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವಕ್ಕೆ ಬುಧವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ಉದ್ಘಾಟಿಸಿದರು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಎಂ.ಎನ್.ಮಧ್ಯಸ್ಥ, ವಿಷ್ಣುಮೂರ್ತಿ ಮಯ್ಯ, ಅರುಣಾಚಲ ಮಯ್ಯ, ಆಡಳಿತ ಟ್ರಸ್ಟಿಗಳು, ಹರ್ತಟ್ಟು ಛಾಯಾ ತರಂಗಿಣಿ ಮುಖ್ಯಸ್ಥೆ ಭಾಗೇಶ್ವರಿ ಗೋಪಾಕೃಷ್ಣ ಮಯ್ಯ, ಸ್ನೇಹಕೂಟದ ಸಂಚಾಲಕಿ ಭಾರತಿ ವಿ.ಮಯ್ಯ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರ್ತಟ್ಟು ಛಾಯಾ ತರಂಗಿಣಿ, ಸ್ನೇಹಕೂಟದಿಂದ ಸಾಂಸ್ಕೃತಿಕ ಸಿರಿ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net