ಮಾಣಿ ಚೆನ್ನಕೇಶವ ದೇಗುಲ ವಾರ್ಷಿಕ ಜಾತ್ರೆ

kota-3
Published on

ಕೋಟ: ಸಾಸ್ತಾನದ ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದ ವಾರ್ಷಿಕ ಜಾತ್ರೆ ಏ.9ಕ್ಕೆ ಆರಂಭಗೊಂಡಿದ್ದು, ಏ.14ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮ

ಏ.9ಕ್ಕೆ ದೇವರಿಗೆ ಮುಹೂರ್ತ ಬಲಿ ಮತ್ತು ಅಂಕುರಾರೋಪಣ ನಡೆಯಿತು. 10ಕ್ಕೆ ಧ್ವಜಾರೋಹಣ, ಶ್ರೀ ವಿಶ್ವೇಶ್ವರ ದೇವರ ಪ್ರತಿಷ್ಠಾಪನೆ ವರ್ಧಂತಿ, ರಾತ್ರಿ ಬಲಿ, ಕಟ್ಟೆ ಪೂಜೆ, ಪುಷ್ಪ ರಥೋತ್ಸವ, ಕಿರಿ ರಂಗಪೂಜೆ ನಡೆಯಿತು. 11ರಂದು ರಾತ್ರಿ ಬಲಿ, ಕಟ್ಟೆಪೂಜೆ, ಪುಷ್ಪರಥೋತ್ಸವ, ಹಿರಿ ರಂಗಪೂಜೆ, 12ರಂದು ರಥಾರೋಹಣ, ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ರಥಾವರೋಹಣ, ಅಷ್ಟಾವಧಾನ ಸೇವೆ, ಉಪಾಹಾರ ವಿತರಣೆ, ಶಯನೋತ್ಸವ ನಡೆಯಲಿದೆ.

13ರಂದು ಪ್ರಬೋಧೋತ್ಸವ, ರಾತ್ರಿ ಚೂರ್ಣೋತ್ಸವ, ಕಟ್ಟೆ ಪೂಜೆ, ಪಲ್ಲಕ್ಕಿ ಉತ್ಸವ, ಅವಭೃತ ಸ್ನಾನ, ಧ್ವಜಾವರೋಹಣ, 14ರಂದು ಸಂಪ್ರೋಕ್ಷಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ 12ರಂದು ಕಲ್ಲಡ್ಕ ಚಿಲಿಪಿಲಿ ಬೊಂಬೆಗಳ ನೃತ್ಯ ತಂಡದಂದ ಆಕರ್ಷಣೀಯ ವೇಷಗಳು, ಕೀಲುಕುದುರೆ, ಗುಂಡ್ಮಿ ರಥಬೀದಿ ಶ್ರೀ ಪಂಜುರ್ಲಿ ಭಜನಾ ತಂಡದಿಂದ ಕುಣಿತ ಭಜನೆ, ಸ್ಥಳೀಯ ಮಹಿಳಾ ಬಳಗದಿಂದ ನೃತ್ಯ, ರಾತ್ರಿ 9.30ರಿಂದ ಶುಭ ಲಕ್ಷ್ಮಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 13ರಂದು ರಾತ್ರಿ ಅಪುದೆಲ್ಲಾ ಒಳ್ಳೆದಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net