

ಕಿನ್ನಿಗೋಳಿ: ಕೇಂದ್ರದ ಹೊಸ ಶಿಕ್ಷಣ ನೀತಿ ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿ ಎಂದು ಶಿರ್ವದ ವಿದ್ಯಾವರ್ಧಕ ಆಂಗ್ಲ ವಾಧ್ಯಮ ಶಾಲೆಯ ಪ್ರಾಂಶುಪಾಲೆ ಡಾ.ಸಹನಾ ಹೆಗ್ಡೆ ಹೇಳಿದರು.
ತೋಕೂರಿನ ಡಾ.ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ವಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ನಿರ್ದೇಶಕ ಪ್ರೊ.ವಿನೋದ್ ಅರಾನ್ಹ ಅಧ್ಯಕ್ಷತೆ ವಹಿಸಿ ವಾತನಾಡಿ, ಹಸಿರು ಸಿರಿಯ ನಡುವೆ ಡಾ.ಎಂ.ಆರ್.ಎಸ್.ಎಂ.ಶಾಲೆ ಉನ್ನತ ಮತ್ತು ಶಿಕ್ಷಣಕ್ಕೆ ಬದ್ಧವಾಗಿರುವುದು ಸಂತಸದ ವಿಚಾರ ಎಂದರು.
ಪ್ರಾಂಶುಪಾಲೆ ಶ್ರೀಲತಾ ರಾವ್ ಶಾಲೆಯ ಚಟುವಟಿಕೆಗಳ ವಾರ್ಷಿಕ ವರದಿ ಮಂಡಿಸಿದರು. ಪೇರೆಂಟ್ ಟೀಚರ್ಸ್ ಅಸೋಸಿಯೇಶನ್ ಅಧ್ಯಕ್ಷ ಪುಷ್ಪರಾಜ್ ಚೌಟ ಪಿ.ಟಿ.ಎ. ವರದಿ ಪ್ರಸ್ತುತ ಪಡಿಸಿದರು. ಹೆಡ್ ಬಾಯ್ ಸಂಜನ್ ಉಳ್ಳಾಲ್ ಸ್ವಾಗತಿಸಿದರು. ಹೆಡ್ ಗರ್ಲ್ ಅಲೀನಾ ಸೆಹರ್ ವಂದಿಸಿದರು. ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆಯ ಬಳಿಕ ಶಾಲಾ ಮಕ್ಕಳಿಂದ ವೈವಿಧ್ಯಮಯ ನೃತ್ಯ ರೂಪಕಗಳು ಸೇರಿದಂತೆ ಶ್ರೀಕೃಷ್ಣ ಲೀಲಾಮೃತ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.