ಆರೋಗ್ಯ ಚಿಕಿತ್ಸೆಗೆ ಸಹಕಾರ ಅವಶ್ಯ: ಡಾ.ಎಂ.ಪಿ.ಶ್ರೀನಾಥ್ ಆಶಯ

Kin_Sahakara
Published on

ಮೂಲ್ಕಿ: ಆರೋಗ್ಯ ಚಿಕಿತ್ಸೆಗೆ ಸಹಕಾರ ನೀಡುವುದಕ್ಕಾಗಿ ಆರ್ಥಿಕವಾಗಿ ಸ್ಪಂದಿಸುವ ಕೆಲಸ ಇನ್ನಷ್ಟು ಆಗಬೇಕಾಗಿದೆ. ಸಾಹಿತ್ಯಾಭಿವಾನಿಗಳು ಈ ನಿಟ್ಟಿನಲ್ಲಿ ಸ್ಪಂದಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದರು.

ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಸಾಹಿತಿ ಗಣೇಶ ಕೊಲೆಕಾಡಿ ಚಿಕಿತ್ಸೆಗೆ ಆರ್ಥಿಕ ನೆರವು ಹಸ್ತಾಂತರಿಸಿ ವಾತನಾಡಿದರು.

ವಿದ್ವಾಂಸ ಗಣೇಶ ಅವರು ಯಕ್ಷಗಾನಕ್ಕೆ, ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಅವರು ಪ್ರಸಂಗಗಳು, ಸಾಹಿತ್ಯ, ಛಂದಸ್ಸು ಕ್ಷೇತ್ರದಲ್ಲಿ ವಾಡಿದ ಕೆಲಸಗಳು ಗಮನೀಯವಾದುದು. ಇಂತಹ ಸಾಹಿತಿಯ ಕಷ್ಟದ ಕಾಲದಲ್ಲಿ ಸಾಹಿತ್ಯಾಭಿವಾನಿಗಳು ಜತೆಗಿರಬೇಕಾದ ಅಗತ್ಯವಿದೆ ಎಂದರು.

ಮೂಲ್ಕಿ ಕಸಾಪದ ಮಿಥುನ ಕೊಡೆತ್ತೂರು, ವಾಧವ ಕೆರೆಕಾಡು, ಸಚ್ಚಿದಾನಂದ ಉಡುಪ, ಕೃಷ್ಣರಾಜ ಭಟ್, ವಿನ್ಸೆಂಟ್, ಉದಯ ಪೂಂಜ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net