ಕಟೀಲು ಕಾಲೇಜಿಗೆ ಸಮಗ್ರ ಪ್ರಶಸ್ತಿ

Mul_Kateel
Published on

ಹಳೆಯಂಗಡಿ: ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತರ್ ಪದವಿಪೂರ್ವ ಕಾಲೇಜುಗಳ ಸ್ಪರ್ಧೆ ಉಡಾನ್ 3.0 ಇದರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪದವಿಪೂರ್ವ ಕಾಲೇಜು ಸಮಗ್ರ ಚಾಂಪಿಯನ್‌ಷಿಪ್ ಪಡೆದುಕೊಂಡಿತು.

ಮೂರನೇ ಆವೃತ್ತಿಯ ಈ ಕಾರ್ಯಕ್ರಮದಲ್ಲಿ 8 ಪದವಿಪೂರ್ವ ಕಾಲೇಜುಗಳು ಹತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವು. ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಪೂಜಾ, ಕೀರ್ತನ ಮತ್ತು ಸುದರ್ಶನ್ ವಿದ್ಯಾರ್ಥಿಗಳಿಗೆ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಕಿವಿಮಾತು ಹೇಳಿದರು.

ಪ್ರಮುಖರಾದ ಪ್ರವೀಣ್, ಪ್ರೊ.ಯೋಗಿಂದ್ರ, ರಘು ದೇವಾಡಿಗ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಡಾ.ಕಿರಣ್ ಉಡಾನ್ ಕಾರ್ಯಕ್ರಮದ ಉದ್ದೇಶ ಮತ್ತು ಕಾಲೇಜಿನ ಸಾಧನೆಗಳ ಬಗ್ಗೆ ತಿಳಿಸಿದರು. ಪ್ರಾಂಶುಪಾಲ ಡಾ.ಜಗದೀಶ್ ಮಾತನಾಡಿದರು. ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net