ನೇತಾಜಿಯವರ ಆದರ್ಶ ದಾರಿದೀಪ

subhas
Published on

ಹೆಬ್ರಿ: ನೇತಾಜಿಯವರ ಆದರ್ಶ ಎಲ್ಲರಿಗೂ ದಾರಿದೀಪ. ಅವರ ವಿಚಾರಧಾರೆ ಮರೆಯದೆ ದೇಶಪ್ರೇಮ ಬೆಳೆಸಿಕೊಂಡು ಜೀವನ ಸಾಗಿಸಬೇಕು. ಸ್ವಾತಂತ್ರೃಕ್ಕಾಗಿ ಹೋರಾಟ ಮಾಡಿದ ನೇತಾಜಿ ಅವರ ರಾಷ್ಟ್ರಪ್ರೇಮ ನಮಗೆಲ್ಲ ಅನುಕರಣೀಯ ಎಂದು ಮುದ್ರಾಡಿ ಗ್ರಾಪಂ ಸದಸ್ಯ ಗಣಪತಿ ಎಂ. ಹೇಳಿದರು.

ನೇತಾಜಿ ಸುಭಾಷ್ ಚಂದ್ರಭೋಸ್ ಜನ್ಮ ದಿನಾಚರಣೆ ಪ್ರಯುಕ್ತ ಮುದ್ರಾಡಿ ಪೇಟೆಯಲ್ಲಿರುವ ನೇತಾಜಿ ಪ್ರತಿಮೆಗೆ ಹಾರಾರ್ಪಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ, ಸದಸ್ಯರಾದ ಸನತ್ ಕುಮಾರ್, ಶಾಂತಾ ದಿನೇಶ್ ಪೂಜಾರಿ, ಶುಭದರ್ ಶೆಟ್ಟಿ, ಪಿಡಿಒ ಅಮೃತ ಕುಲಾಲ್, ಮುದ್ರಾಡಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ, ರಿಕ್ಷಾ ಚಾಲಕ ಮಾಲೀಕರ ಸಂಘ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಪ್ರಮುಖರಾದ ರಾಘವ ನಾಯ್ಕ, ಗುರುಪ್ರಸಾದ್ ಹೆಗ್ಡೆ ಕೊಳಂಬೆ, ಪ್ರಕಾಶ್ ರಾವ್, ಮುದ್ರಾಡಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಶಿಕ್ಷಕರು, ರಿಕ್ಷಾ ಚಾಲಕ ಮಾಲೀಕರು, ಪ್ರೌಢಶಾಲೆ ವಿದ್ಯಾರ್ಥಿ ವೃಂದ, ಊರಿನವರು ಉಪಸ್ಥಿತರಿದ್ದರು. ಮುದ್ರಾಡಿ ಪ್ರೌಢಶಾಲೆ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ವಿ.ಆನಂದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net