

ಕೊಕ್ಕರ್ಣೆ: ಕರ್ಜೆ ಶ್ರೀ ಸಾಯಿ ಸ್ವರಾಂಜಲಿ ವಿದ್ಯಾಲಯದ ಚತುರ್ಥ ವರ್ಷದ ಗಾನ ನಾಟ್ಯೋತ್ಸವ ನೀಲಾವರ ಶ್ರೀ ಶಾರದಾ ಭವನದಲ್ಲಿ ಇತ್ತೀಚೆಗೆ ಜರುಗಿತು.
ಪಾಜಕ ಶ್ರೀ ಆನಂದತೀರ್ಥ ಪಿಯು ಕಾಲೇಜು ಪ್ರಾಂಶುಪಾಲ ಕಮಲಾಕ್ಷಿ ಪ್ರಕಾಶ್ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಪ್ರಕಾಶ್ ಶಾನುಭೋಗ್ ಕರ್ಜೆ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿಶಾರದ ಡಾ.ಅಡೋಲ್ಫ್ ಶರ್ವಿನ್ ಅಮ್ಮಣ್ಣಗೆ ಶ್ರೀ ಸಾಯಿ ಸ್ವರಾಂಜಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ವಿಶ್ವ ಯಕ್ಷ ನೃತ್ಯ ಕಲಾನಿಕೇತನ ಸಂಸ್ಥೆ ಅಧ್ಯಕ್ಷ ವೈ.ಲಕ್ಷ್ಮೀನಾರಾಯಣ ಮಧ್ಯಸ್ಥ ನೀಲಾವರ, ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಸಂಗೀತ ಅಧ್ಯಾಪಕ ಗ್ಲಾಡ್ಸನ್ ರವೀಂದ್ರ, ಕಲಾವಿದ ಮುರಳೀಧರ ಭಟ್ ಮುಂಡ್ಕಿನಜೆಡ್ಡು, ಹೊಸೂರು ಕರ್ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆ ನಿರ್ದೇಶಕಿ ರಾಜರಾಜೇಶ್ವರಿ ಪಿ.ಶಾನುಭೋಗ್ ಸ್ವಾಗತಿಸಿದರು. ಸರ್ವೇಶ್ ಎಳ್ಳಂಪಳ್ಳಿ ವಂದಿಸಿದರು. ವೈ.ಎಲ್.ವಿಶ್ವರೂಪ ಮಧ್ಯಸ್ಥ ನೀಲಾವರ ನಿರೂಪಿಸಿದರು.