ನೇರೋಳ್ತಡ್ಕ ಗಣೇಶೋತ್ಸವ ಸಂಪನ್ನ : ವಿದ್ಯಾರ್ಥಿಗಳಿಗೆ ಅಭಿನಂದನೆ

ganapa
Published on

ಕಡಬ: ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ವಿನಾಯಕನಗರದ ಗೌರಿಸದನದಲ್ಲಿ ಶ್ರೀಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಶನಿವಾರ ರಮೇಶ್ ಪುದ್ವುಣ್ಣಾಯ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ, ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಿತು.

ಪ್ರಗತಿಪರ ಕೃಷಿಕ ಮಂಜಪ್ಪ ಶೆಟ್ಟಿ ನೂಜಾಜೆ ಧ್ವಜಾರೋಹಣಗೈದರು. ಬಳಿಕ ಶ್ರೀಗಣಪತಿ ದೇವರ ಮೂರ್ತಿ ಪ್ರತಿಷ್ಠಾಪನೆ , ಪುಣ್ಚಪ್ಪಾಡಿ ಶ್ರೀ ಕೃಷ್ಣಾರ್ಪಿತ ಭಜನಾ ಮಂಡಳಿ, ದೇವಸ್ಯ ಶ್ರೀಹರಿಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಗಣಹೋಮ ನಡೆಯಿತು.

ಶ್ರೀಗೌರಿ ಗಣೇಶ ಉತ್ಸವ ಸಮಿತಿ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಧಾರ್ಮಿಕ ಉಪನ್ಯಾಸ ನೀಡಿದರು.

ಹಾವೇರಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಪ್ರದೀಪ್ ಕುಮಾರ್ ಜೆ.ನಾಯ್ಕ, ನಿವೃತ್ತ ಸೈನಿಕ ಪ್ರವೀಣ್ ರೈ ನೂಜಾಜೆ, ಸವಣೂರು ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ದೇವಸ್ಯ,ಪುಣ್ಚಪ್ಪಾಡಿ ಶ್ರೀಗೌರಿ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಸಚಿನ್ ಕುಮಾರ್ ಜೈನ್, ಶ್ರೀಗೌರಿ ಗಣೇಶ ಉತ್ಸವ ಸಮಿತಿ ಉಪಾಧ್ಯಕ್ಷ ವಸಂತ ಗೌಡ ಬೆದ್ರಂಪಾಡಿ, ಕಾರ್ಯದರ್ಶಿ ಪ್ರಮೋದ್ ಬೊಳ್ಳಾಜೆ, ಹೊಸಗದ್ದೆ ವಿಸರ್ಜನಾ ಕಟ್ಟೆ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ತುಂಬೆತಡ್ಕ, ಪ್ರಗತಿಪರ ಕೃಷಿಕ ಮಂಜಪ್ಪ ಶೆಟ್ಟಿ ನೂಜಾಜೆ ಉಪಸ್ಥಿತರಿದ್ದರು.

ಶ್ರೀಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಮಹೇಶ್ ಕೆ.ಸವಣೂರು ಸ್ವಾಗತಿಸಿದರು. ಶೀನಪ್ಪ ಶೆಟ್ಟಿ ನೆಕ್ರಾಜೆ ನಿರೂಪಿಸಿದರು. ಸಂಜೆ ಶ್ರೀಮಹಾಗಣಪತಿ ದೇವರ ಮಹಾಪೂಜೆ, ಶ್ರೀಗಣಪತಿ ದೇವರಮೂರ್ತಿ ವಿಸರ್ಜನಾ ಶೋಭಾಯಾತ್ರೆ ನಡೆದು ಬಳಿಕ ಹೊಸಗದ್ದೆ ಗೌರಿ ಹೊಳೆಯಲ್ಲಿ ಗಣಪತಿ ದೇವರ ಮೂರ್ತಿಯ ಜಲಸ್ಥಂಭನ ನಡೆಯಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ

ಪುಣ್ಚಪ್ಪಾಡಿ ಗ್ರಾಮದ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪುಣ್ಚಪ್ಪಾಡಿ ನೇರೋಳ್ತಡ್ಕ ಗೌರಿಸದನದಲ್ಲಿ ನಡೆದಿದ್ದ ಮದ್ಯವರ್ಜನಾ ಶಿಬಿರದಲ್ಲಿ ಪಾಲ್ಗೊಂಡು ವ್ಯಸನಮುಕ್ತರಾದ ನವಜೀವನ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net