

ಬೆಳ್ತಂಗಡಿ: ಎಸ್.ಡಿ.ಎಂ ಆಂಗ್ಲ ಮಾಧ್ಯಮ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶ್ರೀ ಮಂಜುನಾಥ ದಳದ ಬನ್ನಿಸ್, ಕಬ್ಸ್, ಬುಲ್-ಬುಲ್ಸ್, ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣಪತಿ ರಚನೆ ಮಾಡಿ, ಪೂಜಿಸಿ ನಂತರ ವಿಸರ್ಜಿಸಿದರು.
ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ರಾಜೇಶ್ ಬಿ. ಉದ್ಘಾಟಿಸಿ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಪರಿಸರ ಸ್ನೇಹಿ ಗಣಪತಿಯನ್ನು ರಚಿಸುವುದರಲ್ಲಿಯೂ ಸಮಾಜದ ಹಿತರಕ್ಷಣೆಯ ಕಾರ್ಯ ಸಾಧಿಸಿದೆ ಎಂದರು.
ಮುಖ್ಯಶಿಕ್ಷಕಿ ಹೇಮಲತಾ ಎಂ.ಆರ್ ಉಪಸ್ಥಿತರಿದ್ದರು. ಗೈಡ್ ವಿದ್ಯಾರ್ಥಿನಿ ಪ್ರಾಪ್ತಿ ವಿ.ಶೆಟ್ಟಿ ಪರಿಸರ ಸ್ನೇಹಿ ಗಣಪತಿ ತಯಾರಿಸಿದರು. ಗೈಡ್ ಕ್ಯಾಪ್ಟನ್ ಕಾರುಣ್ಯ, ಸ್ಕೌಟ್ ಮಾಸ್ಟರ್‌ಗಳಾದ ಜಯರಾಮ್, ಮಂಜುನಾಥ್ ಸಹಕರಿಸಿದರು. ಕಾರ್ಯದರ್ಶಿ ಪ್ರಮೀಳಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.