ಲಾರಿಗೆ ಸಿಲುಕಿ ಟೋಲ್ ನೌಕರ ಸಾವು

Dead body 1 JUNE 20
Published on

ನೆಲಮಂಗಲ: ವೇಗದಿಂದ ನುಗ್ಗಿದ ಲಾರಿಗೆ ಸಿಲುಕಿ ಟೋಲ್ ನೌಕರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಗರದ ರಾಷ್ಟ್ರೀಯ ಹೆದ್ದಾರಿ 4ರ ನವಯುಗ ಟೋಲ್​ನಲ್ಲಿ ಶನಿವಾರ ರಾತ್ರಿ ಅವಘಡ ಸಂಭವಿಸಿದೆ.

ಪಟ್ಟಣದ ಚನ್ನಪ್ಪ ಬಡಾವಣೆ ನಿವಾಸಿ ಗೋಪಾಲ್ (42) ಮೃತ. ರಾತ್ರಿ ಪಾಳಿಯಲ್ಲಿ 9.30ರಲ್ಲಿ ಊಟ ಮುಗಿಸಿ ಟೋಲ್​ಚೌಕಿಯ ಬಾಗಿಲಿನಲ್ಲಿ ಬಗ್ಗಿ ಕೈತೊಳೆಯುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಗೋಪಾಲ್ ಕೆಳಕ್ಕೆ ಬಿದ್ದಾಗ ಹಿಂಬದಿ ಚಕ್ರ ಹರಿದು ದೇಹ ಸಂಪೂರ್ಣ ಅಪ್ಪಚ್ಚಿಯಾಗಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಗುವಿನ ವಾತಾವರಣ: ಟೋಲ್ ಸಿಬ್ಬಂದಿ, ಮೃತ ಸಂಬಂಧಿಕರು, ಸ್ನೇಹಿತರು ಸ್ಥಳದಲ್ಲಿ ಜಮಾಯಿಸಿದ ಕಾರಣ ಕೆಲಕಾಲ ಬಿಗುವಿನ ವಾತಾವರಣ ನಿರ್ವಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net