

ಹೆಬ್ರಿ: ವಿದ್ಯಾರ್ಥಿಗಳು ನಾಳೆಯ ಪ್ರಜೆಗಳು. ಜವಹಾರಲಾಲ್ ನೆಹರು ಅವರ ಆದರ್ಶ ಎಲ್ಲರಿಗೂ ಮಾದರಿ ಎಂದು ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ ಹೇಳಿದರು.
ಮುದ್ರಾಡಿ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಹಿರಿಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಮಹೇಶ್ ನಾಯ್ಕ್, ಶ್ಯಾಮಲಾ ಕೊಠಾರಿ, ಮಹೇಶ್, ವಿದ್ಯಾರ್ಥಿ ನಾಯಕ ರಂಜಿತ್ ಉಪಸ್ಥಿತರಿದ್ದರು. ಶಿಕ್ಷಕ ರಘುಪತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪಿ.ವಿ.ಆನಂದ ಸಾಲಿಗ್ರಾಮ ವಂದಿಸಿದರು.