ಫಯಾಜ್​ ಜತೆಗಿರುವ ಫೋಟೋಗಳು ವೈರಲ್​; ನೇಹಾ ತಾಯಿ ಹೇಳಿದ್ದೇನು?

Neha Mother
Published on

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಕೊಲೆ ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆ ಕೊಲೆಯಾದ ನೇಹಾ ಮತ್ತು ಆರೋಪಿ ಪಯಾಜ್​ ಪ್ರೀತಿ ಮಾಡುತ್ತಿದ್ದರು ಎಂದು ಹೇಳುತ್ತಿರುವ ಕೆಲವು ಫೋಟೋಗಳು ಸಾಮಾಜಿಕ​​ ಜಾಲತಾಣದಲ್ಲಿ ವೈರಲ್ ಆಗಿವೆ.

ವೈರಲ್ ಆಗುತ್ತಿರುವ ಫೋಟೋಗಳ ಬಗ್ಗೆ ನೇಹಾ ತಾಯಿ ಪ್ರತಿಕ್ರಿಯಿಸಿದ್ದು, ಫೋಟೊಗಳನ್ನು ಎಡಿಟ್ ಮಾಡಿದ್ದಾರೆ, ಸೈನ್ಸ್ ತುಂಬಾ ಮುಂದುವರೆದಿದೆ. ಈಗಿನಕಾಲದಲ್ಲಿ ಏನೇ​ನೋ ಮಾಡ್ತಾರೆ. ಆದರೆ ನನ್ನ ಮಗಳು ಅಂತವಳು ಅಲ್ವೇ ಅಲ್ಲ. ಇವರಿಬ್ಬರು ಒಂದೇ ಕಾಲೇಜಿನಲ್ಲಿ ಓದುತಿದ್ದರು. ಕ್ಲಾಸ್​​​ಮೆಟ್ಸ್ ಅನ್ಸುತ್ತೆ ಅವಳು ಈ ಕುರಿತಾಗಿ ಏನು ಹೇಳಿಲ್ಲ. ನಾವು ಅದರ ಕಡೆ ತಲೆ ಹಾಕಬೇಡ ನೀನು ಚೆನ್ನಾಗಿ ಓದು ಅಂತ ಹೇಳಿದ್ದೆವು ನನ್ನ ಮಗಳು ತುಂಬಾ ಬುದ್ದಿವಂತೆ ಆಗಿದ್ದಳು. ಬಿಸಿಎ ಮಾಡಿ ನಂತರ ಎಮ್​​ಸಿಎ ಮಾಡ್ತಿನಿ ಎಂದು ನಮ್ಮ ಬಳಿ ಹೇಳುತ್ತಿದ್ದಳು ಎಂದಿದ್ದಾರೆ. ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ಅವನಿಗೆ ಶಿಕ್ಷೆ ಆಗಬೇಕು. ಜನಗಳು ಅವಳ ಸಾವಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿ ಎಂದಿದ್ದಾರೆ.

ಕಾಲೇಜ್​ಗೆ ಮೂರು ಗೇಟ್ ಇದೆ. ಯಾರು ಎಲ್ಲಿ ಬಂದ್ರು ತಿಳಿಯುವುದಿಲ್ಲ. ಸೆಕ್ಯೂರಿಟಿ ಇಲ್ಲ ಅದೆ ಬೇರೆ ಕಾಲೇಜಿನಲ್ಲಿ ಆದ್ರೆ ಐಡಿ ಕಾರ್ಡ್​ ನೋಡಿ ಒಳಗೆ ಬಿಡ್ತಾರೆ ಇಲ್ಲಿ ಎನಿಲ್ಲ ಯಾರು ಬರ್ತಾರೆ ಯಾರು ಹೋಗುತ್ತಾರೆ ಎನ್ನುವುದು ತಿಳಿಯುವುದಿಲ್ಲ. ನನ್ನ ಮಗಳು ಓದುತ್ತಿದ್ದ ಕಾಲೇಜಿನಲ್ಲಿ ಎಲ್ಲಾ ಬಿಂದಾಸದದ ಆಗಿ ಹೋಗಿ ಬರ್ತಾರೆ. ಹೀಗಾದ್ರೆ ಹೆಣ್ಣು ಮಕ್ಕಳಿಗೆ ಮುಂದೆ ಹೇಗೆ ಹೋಗುತ್ತಾರೆ. ನಾನು ನಾಲ್ಕು ಬಾರಿ ಕಾಲೇಜಿಗೆ ಹೋಗಿದ್ದೇನೆ. ಯಾರು ಕೇಳಿಲ್ಲ ಯಾಕೆ ಬಂದಿದ್ದೀಯಾ ಏನು ಅಂತ ಯಾರು ಕೇಳಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ನೇಹಾ ತಾಯಿ ಆಗ್ರಹಿಸಿದ್ದಾರೆ.

Neha Fayaz
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net