More

    ಆರ್​ಸಿಬಿಗೆ ಅಷ್ಟಾಗಿ ಕೈ ಹಿಡಿದಿಲ್ಲ ಹಸಿರುಡುಗೆ; ಯಾಕೆ ಗೊತ್ತಾ?

    ಕಲ್ಕತ್ತಾ: ಹೊಸ ಅಧ್ಯಾಯವನ್ನು ಸತತ ಸೋಲುಗಳ ಮೂಲಕ ಆರಂಭಿಸಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 17ನೇ ಆವೃತ್ತಿಯ ಐಪಿಎಲ್​ನಲ್ಲಿ ನಿರೀಕ್ಷಿತ ಪ್ರದರ್ಶನವನ್ನು ನೀಡಿಲ್ಲ. ಆಡಿರುವ 7 ಪಂದ್ಯಗಳ ಪೈಕಿ 6ರಲ್ಲಿ ಸೋತು, 1ರಲ್ಲಿ ಗೆದ್ದಿರುವ ಆರ್​ಸಿಬಿ ಕಳೆದ ಪಂದ್ಯದಲ್ಲಿ ಎಸ್​ಆರ್​ಎಚ್​ ವಿರುದ್ಧ ಅಂತಿಮ ಕ್ಷಣದವರೆಗೂ ಹೋರಾಡಿ ಸೋಲು ಕಂಡಿತ್ತು. ಮುಂದಿನ ಎಲ್ಲಾ ಪಂದ್ಯಗಳು ಆರ್​ಸಿಬಿ ಪಾಲಿಗೆ ನಿರ್ಣಾಯಕವಾಗಿದ್ದು, 7 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ 16 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದಾಗಿದೆ.

    ಏಪ್ರಿಲ್​ 21ರಂದು ಈಡೆನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ 35ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕಲ್ಕತ್ತಾ ನೈಟ್​ರೈಡರ್ಸ್​ ಮುಖಾಮುಖಿಯಾಗಲಿವೆ. ಈ ಮೂಲಕ ಆರ್​ಸಿಬಿ 2024ನೇ ಸಾಲಿನ ಐಪಿಎಲ್​ ದ್ವಿತೀಯಾರ್ಧವನ್ನು ಪ್ರಾರಂಭಿಸಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಹರಿರುಡುಗೆಯಲ್ಲಿ ಕಣಕ್ಕಿಳಿಯುತ್ತಿರುವುದು ಮತ್ತಷ್ಟು ವಿಶೇಷವೆನ್ನಿಸಿದೆ.

    ಏಕೆಂದರೆ ಆರ್​ಸಿಬಿ ಗೋ ಗ್ರೀನ್​ ಅಭಿಯಾನದ ಭಾಗವಾಗಿ 2011ರಿಂದಲೂ ಒಂದು ಪಂದ್ಯವನ್ನು ಹಸಿರುಡುಗೆಯಲ್ಲಿ ಕಣಕ್ಕಿಳಿಯುತ್ತಿದೆ. 2011ರಿಂದ ಆರ್​ಸಿಬಿ ಇಲ್ಲಿಯವರೆಗೂ ಗ್ರೀನ್​ ಜೆರ್ಸಿಯಲ್ಲಿ 13 ಪಂದ್ಯಗಳನ್ನು ಆಡಿದ್ದು ಈ ವೇಳೆ ನಾಲ್ಕು ಬಾರಿ ಮಾತ್ರ ಗೆದ್ದಿದೆ. ಇನ್ನು 8 ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ ಒಂದು ಪಂದ್ಯದಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ. ಇದಲ್ಲದೆ ಆರ್​ಸಿಬಿ ಪಾಲಿಗೆ ಗ್ರೀನ್​ ಜೆರ್ಸಿ ಅಷ್ಟಾಗಿ ಕೈ ಹಿಡಿದಿಲ್ಲ ಎಂದು ಹೇಳಲಾಗಿದೆ.

    RCB

    ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯರಿಂದ ನಾಯಕತ್ವ ಕಿತ್ತುಕೊಂಡ್ರಾ ರೋಹಿತ್​ ಶರ್ಮಾ?; ಇಲ್ಲಿದೆ ಪುರಾವೆ

    ಕಳೆದ 5 ಸೀಸನ್​ಗಳಲ್ಲಿ ಆರ್​ಸಿಬಿ ಗ್ರೀನ್​ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದು, ಈ ಪೈಕಿ 2ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಕಳೆದ ವರ್ಷ ರಾಜಸ್ಥಾನ ರಾಯಲ್ಸ್​ ವಿರುದ್ಧ ಗ್ರೀನ್​ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದ ಆರ್​ಸಿಬಿ ಭರ್ಜರಿ ಜಯ ಸಾಧಿಸಿತ್ತು. ಇಂದು (ಏಪ್ರಿಲ್ 21) ಕಲ್ಕತ್ತಾ ನೈಟ್​ರೈಡರ್ಸ್​ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆಲ್ಲುವ ಮೂಲಕ ಗ್ರೀನ್ ಜೆರ್ಸಿ ಅನ್​ಲಕ್ಕಿ ಎಂಬ ವಾದವನ್ನು ಆರ್​ಸಿಬಿ ತೊಡೆದು ಹಾಕಲಿದೆಯಾ ಎಂದು ಕಾದು ನೋಡಬೇಕಿದೆ.

    ಅದರಂತೆ ಗ್ರೀನ್​ ಜೆರ್ಸಿಯಲ್ಲಿ ಆರ್​ಸಿಬಿ ಫಲಿತಾಂಶ ಹೀಗಿದೆ: 2011 ರಲ್ಲಿ ಗೆಲುವು, 2012 ರಲ್ಲಿ ಸೋಲು, 2013 ರಲ್ಲಿ ಸೋಲು, 2014 ರಲ್ಲಿ ಸೋಲು, 2015 ರಲ್ಲಿ ಫಲಿತಾಂಶವಿಲ್ಲ, 2016 ರಲ್ಲಿ ಗೆಲುವು, 2017 ರಲ್ಲಿ ಸೋಲು, 2018 ರಲ್ಲಿ ಸೋಲು, 2019 ರಲ್ಲಿ ಸೋಲು, 2020 ರಲ್ಲಿ ಸೋಲು, 2021 ರಲ್ಲಿ (ನೀಲಿ ಜೆರ್ಸಿ) ಸೋಲು, 2022 ರಲ್ಲಿ ಗೆಲುವು, 2023 ರಲ್ಲಿ ಗೆಲುವು ಸಾಧಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts