ಧೋನಿ ಅಬ್ಬರಕ್ಕೆ ಎಬಿಡಿ ಹೆಸರಿನಲ್ಲಿದ್ದ ದಾಖಲೆ ಉಡೀಸ್​; ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ

MS Dhoni
Published on

ಲಖನೌ: ಇಲ್ಲಿನ ಭಾರತ ರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಕೆ.ಎಲ್. ರಾಹುಲ್ ಸಾರಥ್ಯದ ಲಖನೌ ಸೂಪರ್​ಜೈಂಟ್ಸ್​ ತಂಡವು ಋತುರಾಜ್​ ನಾಯಕತ್ವದ ಚೆನ್ನೈ ಸೂಪರ್​ಕಿಂಗ್ಸ್​ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಸೂಪರ್​ಕಿಂಗ್ಸ್​ ತಂಡವು ರವೀಂದ್ರ ಜಡೇಜಾ (57 ರನ್, 40 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧತಶಕ, ಮೊಯಿನ್ ಅಲಿ (30 ರನ್, 20 ಎಸೆತ, 3 ಸಿಕ್ಸರ್), ಮಾಜಿ ನಾಯಕ ಎಂ.ಎಸ್. ಧೋನಿ (28 ರನ್, 9 ಎಸೆತ, 3 ಬೌಂಡರಿ, 2 ಸಿಕ್ಸರ್) ಉಪಯುಕ್ತ ಬ್ಯಾಟಿಂಗ್ ಫಲವಾಗಿ ಚೆನ್ನೈ ಸೂಪರ್​ಕಿಂಗ್ಸ್​ ತಂಡವು 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 176 ರನ್​ಗಳಿಸಿತ್ತು.

ಈ ಪಂದ್ಯದಲ್ಲಿ ಕೇವಲ 9 ಎಸೆತಗಳನ್ನು ಎದುರಿಸಿದ ಧೋನಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 28 ರನ್ ಕಲೆಹಾಕಿದರು. ಇದರೊಂದಿಗೆ ಐಪಿಎಲ್‌ನಲ್ಲಿ ನೂತನ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅದು ಕೂಡ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಕೇವಲ 9 ಎಸೆತಗಳನ್ನು ಎದುರಿಸಿದ ಧೋನಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 28 ರನ್ ಕಲೆಹಾಕಿದ ಧೋನಿ  ಐಪಿಎಲ್‌ನಲ್ಲಿ ವಿಕೆಟ್‌ಕೀಪರ್ ಆಗಿ 5000 ರನ್ ಪೂರೈಸಿದ ಏಕೈಕ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಾಸ್ತವವಾಗಿ ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ 5162 ರನ್ ಗಳಿಸಿದ್ದರು. ಇದೀಗ ಧೋನಿ ರನ್​ಗಳ ವಿಚಾರದಲ್ಲಿ ಡಿವಿಲಿಯರ್ಸ್​ರನ್ನು ಹಿಂದಿಕ್ಕಿದ್ದಾರೆ.

ಪ್ರಸ್ತುತ ಐಪಿಎಲ್​ನಲ್ಲಿ ಸಕ್ರಿಯರಾಗಿರುವ ಧೋನಿ ಇದುವರೆಗೆ ಆಡಿರುವ 257 ಪಂದ್ಯಗಳ 223 ಇನ್ನಿಂಗ್ಸ್‌ಗಳಲ್ಲಿ 5169 ರನ್ ಗಳಿಸಿದ್ದಾರೆ. ಎಬಿ ಡಿವಿಲಿಯರ್ಸ್ ಇಲ್ಲಿಯವರೆಗೆ 5000 ರನ್ ಪೂರೈಸಿದ ಏಕೈಕ ವಿಕೆಟ್ ಕೀಪರ್ ಆಗಿದ್ದರು. ಇದೀಗ ಈ ಪಟ್ಟಿಗೆ ಧೋನಿ ಸೇರಿಕೊಂಡಿದ್ದಾರೆ. ಇದಲ್ಲದೆ ಧೋನಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಇದೀಗ ಆರನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಧೋನಿ ಅಲ್ಲದೆ, ಸುರೇಶ್ ರೈನಾ (5528 ರನ್), ರೋಹಿತ್ ಶರ್ಮಾ (6508 ರನ್), ಡೇವಿಡ್ ವಾರ್ನರ್ (6563 ರನ್), ಶಿಖರ್ ಧವನ್ (6769 ರನ್) ಮತ್ತು ವಿರಾಟ್ ಕೊಹ್ಲಿ (7624 ರನ್) ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net