More

    ಈ ಬಾರಿಯೂ ಹಸಿರುಡುಗೆಯಲ್ಲಿ ಕಣಕ್ಕಿಳಿಯಲಿದೆ ಆರ್​ಸಿಬಿ; ಕಾರಣ ಹೀಗಿದೆ

    ಬೆಂಗಳೂರು: ಹೊಸ ಅಧ್ಯಾಯವನ್ನು ಸತತ ಸೋಲುಗಳಿಂದ ಶುರು ಮಾಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 17ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಿರುವ ಏಳು ಪಂದ್ಯಗಳ ಪೈಕಿ 6ರಲ್ಲಿ ಸೋತು ಒಂದರಲ್ಲಿ ಮಾತ್ರ ಗೆದ್ದಿದೆ. ಹಾಲಿ ಟೂರ್ನಿಯಲ್ಲಿ ಪ್ಲೇಆಫ್​ ಹಾದಿಯನ್ನು ದುರ್ಗಮವಾಗಿರಿಸಿಕೊಂಡಿರುವ ಆರ್​ಸಿಬಿಗೆ ಮುಂಬರುವ ಎಲ್ಲಾ ಪಂದ್ಯಗಳನ್ನು ಸೆಮಿಫಿನಾಲೆ ಎಂದು ಪರಿಗಣಿಸಿ ಆಟವಾಡಬೇಕಿದೆ.

    ಸತತ ಸೋಲುಗಳ ನಡುವೆಯೇ ಆರ್​ಸಿಬಿ ತಂಡ ಘೋಷಣೆ ಒಂದನ್ನು ಮಾಡಿದೆ. ಅದರಂತೆ ಪ್ರತಿಬಾರಿಯಂತೆ ಈ ಬಾರಿಯೂ ಗೋ ಗ್ರೀನ್ ಡೇ ಸಂಪ್ರದಾಯವನ್ನು ಮುಂದುವರಿಸಲಿದೆ. ಮುಂಬರುವ ಪಂದ್ಯದಲ್ಲಿ ಆರ್​ಸಿಬಿ ಹಸಿರು ಜೆರ್ಸಿ ಧರಿಸಿ ಮೈದಾನಕ್ಕಿಳಿಯಲಿದೆ. ಈ ವಿಚಾರವನ್ನು ಆರ್​ಸಿಬಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಿದೆ.

    ಇದನ್ನೂ ಓದಿ: ರಾಜ್ಯದ ವಿವಿಧೆಡೆ ತಂಪೆರೆದ ವರುಣ; ಸಿಡಿಲಿನ ಹೊಡೆತಕ್ಕೆ ನೆಲಕುರುಳಿದ ಐತಿಹಾಸಿಕ ಮೆಹೆತರ್ ಮಹಲ್‌

    ಸತತ ಸೋಲುಗಳಿಂದ ಈಗಾಗಲೇ ತೀವ್ರ ಟೀಕೆಗೆ ಗುರಿಯಾಗಿರುವ ಆರ್​ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಕಲ್ಕತ್ತಾ ನೈಟ್​ರೈಡರ್ಸ್​ ತಂಡವನ್ನು ಎದುರಿಸಲಿದೆ. ವಾಡಿಕೆಯಂತೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೋ ಗ್ರೀನ್ ಡೇ ಸಂಪ್ರದಾಯವನ್ನು ಮುಂದುವರಿಸಲಿದೆ. ಈಡೆನ್​ ಗಾರ್ಡನ್ಸ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಹಸಿರು ಜೆರ್ಸಿ ಧರಿಸಿ ಮೈದಾನಕ್ಕಿಳಿಯಲಿದೆ.

    2011ರಿಂದಲೂ ಆರ್​ಸಿಬಿ ಟೂರ್ನಿಯಲ್ಲಿ ಆಡುವ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ತನ್ನ ಅಭಿಮಾನಿಗಳಲ್ಲಿ ಸ್ವಚ್ಛ ಮತ್ತು ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್​ಸಿಬಿ ಈ ಹಸಿರು ಜೆರ್ಸಿಯನ್ನು ಧರಿಸಲಿದೆ. ಅದರಂತೆ ಈ ಬಾರಿಯೂ ಆರ್​ಸಿಬಿ ತಂಡ ಕೆಕೆಆರ್ ವಿರುದ್ಧ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡಲಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts