ಹಾರ್ದಿಕ್​ ಪಾಂಡ್ಯರಿಂದ ನಾಯಕತ್ವ ಕಿತ್ತುಕೊಂಡ್ರಾ ರೋಹಿತ್​ ಶರ್ಮಾ?; ಇಲ್ಲಿದೆ ಪುರಾವೆ

Rohit Pandya
Published on

ಮುಂಬೈ: ಐಪಿಎಲ್​ ಶುರುವಾಗುವುದಕ್ಕೂ ಮುನ್ನ ನಾಯಕತ್ವ ಬದಲಾವಣೆ ಮಾಡುವ ಮೂಲಕ ರೋಹಿತ್​ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಒಂದಿಲ್ಲೊಂದು ರೀತಿ ಟ್ರೋಲ್​ಗೆ ಗುರಿಯಾಗಿತ್ತು. ಹಾರ್ದಿಕ್​ ಬದಲಿಗೆ ರೋಹಿತ್​ರನ್ನು ಮತ್ತೊಮ್ಮೆ ನಾಯಕನನ್ನು ನೇಮಿಸುವಂತೆ ಹಲವರು ಆಗ್ರಹಿಸಿದ್ದರು. ಆದದರೆ, ಇದೀಗ ಇದಕ್ಕೆ ಪೂರಕವಂಬಂತೆ ಘಟನೆಯೊಂದು ನಡೆದಿದ್ದು, ಎಲ್ಲರೂ ರೋಹಿತ್​ ಶರ್ಮಾ ಮುಂಬೈ ಕ್ಯಾಪ್ಟನ್​ ಎಂದು ಹೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಹಲವರು ಪಾಂಡ್ಯ ಬದಲಿಗೆ ರೋಹಿತ್​ ಶರ್ಮಾರನ್ನು ನಾಯಕನನ್ನಾಗಿ ನೇಮಿಸಿ ಎಂದು ಫ್ರಾಂಚೈಸಿಗೆ ಮನವಿ ಮಾಡಿದ್ದಾರೆ.

ಪಂಜಾಬ್​ ಕಿಂಗ್ಸ್ ವಿರುದ್ಧ​ ಏಪ್ರಿಲ್​ 19ರಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ 9 ರನ್​ಗಳ ರೋಚಕ ಜಯಗಳಿಸಿತ್ತು. ಈ ಪಂದ್ಯದ ಕಡೆ ಓವರ್​ ಎಸೆದ ಆಕಾಶ್​ ಮಧ್ವಾಲ್​ ಬಿಗಿ ದಾಳಿಯ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಅಂತಿಮ ಓವರ್​ ಎಸೆಯುವ ಮುನ್ನ ಆಕಾಶ್​ ಜೊತೆ ರೋಹಿತ್​ ಶರ್ಮಾ ಮಾತುಕತೆ ನಡೆಸಿದ್ದು, ಈ ವೇಳೆ ಹಾರ್ದಿಕ್​ ಪಾಂಡ್ಯ ಜತೆಯಲ್ಲಿರುತ್ತಾರೆ. ಆದರೆ, ಬೌಲರ್​ ಆಕಾಶ್​ ಹಾರ್ದಿಕ್​ ಮಾತಿಗೆ ಸೊಪ್ಪು ಹಾಕದೆ ರೋಹಿತ್​ ಶರ್ಮಾ ಹೇಳಿದಂತೆ ಬೌಲ್​ ಮಾಡುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ರೋಹಿತ್​ ಶರ್ಮಾರನ್ನು ಹಾಡಿ ಹೊಗಳಿದ್ದಾರೆ. ಹಾರ್ದಿಕ್​ ಪಾಂಡ್ಯರ ಬದಲಿಗೆ ರೋಹಿತ್​ರನ್ನು ತಂಡದ ನಾಯಕನನ್ನಾಗಿ ನೇಮಿಸಿ ಈಗಲೂ ಕಾಲ ಮಿಂಚಿಲ್ಲ ಎಂದು ನೆಟ್ಟಿಗರು ಕಮೆಂಟ್​ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net