More

    ಎಸ್​ಆರ್​ಎಚ್​ ಬ್ಯಾಟ್ಸ್​ಮನ್​ಗಳ ಅಬ್ಬರಕ್ಕೆ ಆರ್​ಸಿಬಿ ಹೆಸರಿನಲ್ಲಿದ್ದ ದಾಖಲೆಗಳು ಉಡೀಸ್

    ನವದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 34ನೇ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಸನ್​ರೈಸರ್ಸ್​​ ಹೈದರಾಬಾದ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 67ರನ್​ಗಳ ಭರ್ಜರಿ ಜಯ ದಾಖಲಿಸಿದೆ. ಇನ್ನೂ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ ತಂಡವು ಟ್ರಾವಿಸ್​ ಹೆಡ್​ ಹಾಗೂ ಅಬಿಷೇಕ್​ ಶರ್ಮಾ ಸ್ಫೋಟಕ ಬ್ಯಾಟಿಂಗ್​ ಫಲವಾಗಿ ಐಪಿಎಲ್​ನಲ್ಲಿ ಮತ್ತೊಮ್ಮೆ ಬೃಹತ್​ ಮೊತ್ತ ಪೇರಿಸುವ ಮೂಲಕ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.

    2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡವು ಕ್ರಿಸ್ ಗೇಲ್​ (175) ಅವರ ಶತಕದ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 263 ರನ್ ಬಾರಿಸುವ ಮೂಲಕ ದಾಖಲೆ ಬರೆದಿತ್ತು. ಈ ಸರ್ವಶ್ರೇಷ್ಠ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎನ್ನಲಾಗಿತ್ತು. ಅದರಂತೆ ಕಳೆದ 10 ವರ್ಷಗಳಲ್ಲಿ ಈ ದಾಖಲೆಯ ಸಮೀಪಕ್ಕೂ ತಲುಪಲು ಯಾವುದೇ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಪ್ಯಾಟ್​ ಕಮ್ಮಿನ್ಸ್​ ಪಡೆಯು ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದು, ಆರ್​ಸಿಬಿ ಹೆಸರಿನಲ್ಲಿರುವ ದಾಖಲೆಗಳನ್ನು ಮುರಿದಿದೆ.

    ಇದನ್ನೂ ಓದಿ: ಧೋನಿ ಅಬ್ಬರಕ್ಕೆ ಎಬಿಡಿ ಹೆಸರಿನಲ್ಲಿದ್ದ ದಾಖಲೆ ಉಡೀಸ್​; ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ

    ಹಾಲಿ ಐಪಿಎಲ್​ನಲ್ಲಿ ಋತುವಿನಲ್ಲಿ 272 ರನ್​ ಬಾರಿಸುವ ಮೂಲಕ ಎಸ್​ಆರ್​ಎಚ್​ ಬಳಿಕ ಆರ್​ಸಿಬಿ ವಿರುದ್ಧ 287 ರನ್​ ಹೊಡೆಯುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 26 ರನ್​ ಸಿಡಿಸುವ ಮೂಲಕ ಪ್ಯಾಟ್​ ಕಮ್ಮಿನ್ಸ್​ ಪಡೆ ಮತ್ತೊಮ್ಮೆ ಅಬ್ಬರಿಸಿದ್ದು, ಈ ಮೂಲಕ ಒಂದೇ ಸೀಸನ್​ನಲ್ಲಿ ಮೂರು ಬಾರಿ 263+ ಸ್ಕೋರ್​ಗಳಿಸಿ ಆರ್​ಸಿಬಿ ತಂಡದ ಸರ್ವಶ್ರೇಷ್ಠ ದಾಖಲೆಯನ್ನು ಮೂರು ಬಾರಿ ಮುರಿದಿದೆ.

    ಇದಲ್ಲದೆ 263ಕ್ಕೂ ಅಧಿಕ ಸ್ಕೋರ್​ ಮಾಡಿದ ತಂಡಗಳ ಪೈಕಿ ಎಸ್​ಆರ್​ಎಚ್​ ಮೊದಲೆರಡು ಸ್ಥಾನಗಳಲ್ಲಿದೆ. ಮೂರನೇ ಸ್ಥಾನದಲ್ಲಿದ್ದು, ಶ್ರೇಯಸ್ಸ ಅಯ್ಯರ್​ ನೇತೃತ್ವದ ಕಲ್ಕತ್ತಾ ನೈಟ್​ರೈಡರ್ಸ್​ (272) ಇದ್ದು, ಆರ್​ಸಿಬಿ ಐದನೇ ಸ್ಥಾನಕ್ಕೆ ತಳಲ್ಪಟ್ಟಿದೆ. ಒಟ್ಟಿನಲ್ಲಿ 17ನೇ ಆವೃತ್ತಿಯಲ್ಲಿ ಆರ್​ಸಿಬಿಗೆ ಯಾಕೋ ಲಕ್​ ಕೈಕೊಟ್ಟಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಯಾವ ತಂಡ ಈ ದಾಖಲೆಯನ್ನು ಮುರಿಯಲಿದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts