

ಬೆಂಗಳೂರು: ಕಳೆದ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಹಂತದಲ್ಲಿ ಮತದಾನವಾಗಿದ್ದ ಮತಗಟ್ಟೆಗಳ ಮೇಲೆ ವಿಶೇಷ ಗಮನಹರಿಸಿ ವೋಟಿಂಗ್ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಮತಗಟ್ಟೆಗಳ ವ್ಯಾಪ್ತಿಯ ಬೂತ್ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮನೆಗಳ ಮುಂದೆ ಓಟರ್ ಸ್ಟಿಕ್ಕರ್ಗಳನ್ನು ಅಂಟಿಸಲಿದ್ದಾರೆ. ಇದಕ್ಕಾಗಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಓಟರ್ ಸ್ಲಿಪ್, ಓಟರ್ ಗೈಡ್ಗಳನ್ನು ತ್ವರಿತಗತಿಯಲ್ಲಿ ವಿತರಿಸಬೇಕು. ಓಟರ್ ಸ್ಲಿಪ್ನ ಹಿಂಭಾಗದಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗುವುದು. ವೋಟಿಂಗ್ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಮತದಾನ ನಡೆಯುವ ದಿನದಂದು ಹೆಚ್ಚು ಮತದಾರರು ಮತಗಟ್ಟೆಗಳಿಗೆ ಆಗಮಿಸುವಂತೆ ಹುರಿದುಂಬಿಸಲಾಗುತ್ತಿದೆ ಎಂದರು.
ಮನೆಯಿಂದ 7,367 ಮಂದಿ ಮತದಾನ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಮವಾರದವರೆಗೆ 85 ವರ್ಷ ಮೇಲ್ಪಟ್ಟವರು,ಅಂಗವಿಕಲರು ಒಟ್ಟು 7,367 ಮಂದಿ ಮನೆಯಲ್ಲಿ ಮತದಾನ ಮಾಡಿದ್ದಾರೆ.ಏ.18ರವರೆಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ರಾಜಧಾನಿಯಲ್ಲಿ 7,858 ಮಂದಿ ಪೈಕಿ 7,367 ಮಂದಿ ಮತದಾನ ಮಾಡಿದ್ದು, ಶೇ.93 ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ 1,663, ಬೆಂಗಳೂರು ಉತ್ತರ 1,685, ಬೆಂಗಳೂರು ದಣ 2,117 ಹಾಗೂ ಬೆಂಗಳೂರು ನಗರದಲ್ಲಿ 1,902 ಮಂದಿ ಮತದಾನ ಮಾಡಿದ್ದಾರೆ.