ಕಾಯಿಲೆ ಶಮನಕ್ಕೆ ದೈಹಿಕ ಚಟುವಟಿಕೆ : ಹಳೆಯಂಗಡಿಯಲ್ಲಿ ಧನಂಜಯ್ ಕದ್ರಿತೋಟ ಸಲಹೆ

New Project (24)
Published on

ಹಳೆಯಂಗಡಿ: ಮಕ್ಕಳಲ್ಲಿ ಬರುವ ಕಾಯಿಲೆಗಳ ಶಮನಕ್ಕೆ, ದೈಹಿಕ ಹಾಗೂ ಮಾನಸಿಕ ದೃಢತೆ ಉತ್ತೇಜನಕ್ಕೆ ಜೀವನಶೈಲಿಯಲ್ಲಿ ದಿನದ ಒಂದು ಗಂಟೆ ದೈಹಿಕ ಚಟುವಟಿಕೆಗೆ ಮೀಸಲಿಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಧನಂಜಯ್ ಕದ್ರಿತೋಟ ಹೇಳಿದರು.

ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಕಿಶೋರ -ಕಿಶೋರಿ ಸಂಘ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ವತಿಯಿಂದ ನಡೆದ ಏಕ್ ಘಂಟಾ, ಖೇಲ್ ಕೆ ಮೈದಾನ್ ಮೇ ಎಂಬ ವಿಷಯದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಿಶೋರ-ಕಿಶೋರಿ ಸಂಘದ ವಿದ್ಯಾರ್ಥಿಗಳಿಗೆ ದೇಶೀಯ ಆಟದ ಪರಿಚಯ ಮತ್ತು ಆಟಗಳನ್ನು ಯುವಕ ಮಂಡಲದ ಸದಸ್ಯ ನಟರಾಜ್ ಹೇಳಿಕೊಟ್ಟರು.

ಯುವಕ ಮಂಡಲದ ಮಾಜಿ ಅಧ್ಯಕ್ಷ ನಾಗೇಶ್ ಟಿ.ಜಿ, ಗೌರವ ಪ್ರಧಾನ ಕಾರ್ಯದರ್ಶಿ ಯತೀಶ್ ಕೋಟ್ಯಾನ್, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸ್ಕಾೃನಿ ಡಿಕೋಸ್ಟಾ, ಯುವತಿ ಮಂಡಲದ ಅಧ್ಯಕ್ಷೆ ರಶ್ವಿತ, ಗೌರವ ಪ್ರಧಾನ ಕಾರ್ಯದರ್ಶಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ನಿಶಾ, ಯಶಸ್ವಿನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net