ಪ್ರಯಾಣಿಕರಿಗೆ ನಿತ್ಯ ಗೋಳು : ಕೆಎಸ್ಸಾರ್ಟಿಸಿ ಶಕ್ತಿ ಯೋಜನೆಯಿಂದ ಫುಲ್ ರಶ್ : ಬೆಳ್ತಂಗಡಿ, ಮಡಂತ್ಯಾರು, ಪುಂಜಾಲಕಟ್ಟೆಯವರಿಗೆ ಸಮಸ್ಯೆ

New Project (18)
Published on

ವಿನುತಾ ಪುಂಜಾಲಕಟ್ಟೆ

ಧರ್ಮಸ್ಥಳ-ಮಂಗಳೂರು ನಡುವೆ ನಿತ್ಯ ಪ್ರಯಾಣಿಸುವ ಬೆಳ್ತಂಗಡಿ, ಮಡಂತ್ಯಾರು, ಪುಂಜಾಲಕಟ್ಟೆಯ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಇಲ್ಲದಿರುವುದು ಇನ್ನೊಂದು ಪ್ರಮುಖ ಸಮಸ್ಯೆ.

ಧರ್ಮಸ್ಥಳದಿಂದ ಹೊರಟು ಬೆಳ್ತಂಗಡಿ, ಮಡಂತ್ಯಾರು ತಲುಪುವಾಗಲೇ ಬಸ್ಸುಗಳು ಪ್ರಯಾಣಿಕರಿಂದ ತುಂಬಿರುತ್ತವೆ. ಪುಂಜಾಲಕಟ್ಟೆ-ಬಂಟ್ವಾಳ ನಡುವೆ ಬಸ್ ನಿಲ್ಲಿಸುವುದಿಲ್ಲ. ಇದರಿಂದ ಅಲ್ಲಿನ ಜನರು ಸಮಯಕ್ಕೆ ಸರಿಯಾಗಿ ಶಾಲೆ ಅಥವಾ ಕಚೇರಿಗಳಿಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಶಕ್ತಿ ಯೋಜನೆ ಪರಿಣಾಮ, ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ.

ಈ ಮಾರ್ಗದಲ್ಲಿ 20 ನಿಮಿಷಗಳ ಅಂತರದಲ್ಲಿ ಬಸ್ ಸಂಚಾರವಿದೆ. ಬಸ್‌ಗಳು ತಡವಾಗಿ ಬರುವುದು ಅಥವಾ ಕೊನೇ ಕ್ಷಣಕ್ಕೆ ಬಾರದ ಉದಾಹರಣೆಯೂ ಇದೆ. ಶಾಲೆ ಹಾಗೂ ಕಚೇರಿ ಸಮಯವಾದುದರಿಂದ ಬೆಳಗ್ಗೆ 7ರಿಂದ 9 ಗಂಟೆಯ ನಡುವೆ ಮತ್ತು ಸಂಜೆ 4ರಿಂದ 6 ಗಂಟೆಯ ವೇಳೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಷಟ್ಲ್ ಬಸ್‌ಗಳು ನಿಯಮ ಮೀರಿ ಎಕ್ಸ್‌ಪ್ರೆಸ್ ಬಸ್‌ಗಳಂತೆ ನಿಲ್ಲಿಸದೆ ಹೋಗುತ್ತವೆ. ಮೂರ್ಜೆ, ಎನ್.ಸಿ.ರೋಡ್ ಬಸ್‌ಸ್ಟಾೃಂಡ್‌ನಲ್ಲಿ ಕಾಯುವವರು ಈ ಸಮಸ್ಯೆಯಿಂದಾಗಿ ಪ್ರಮುಖ ಬಸ್‌ಸ್ಟಾೃಂಡ್‌ಗಳಾದ ಪುಂಜಾಲಕಟ್ಟೆ, ಮಡಂತ್ಯಾರು, ಬೆಳ್ತಂಗಡಿಗೆ ಇತರ ವಾಹನಗಳಲ್ಲಿ ಬಂದು, ಬಸ್ ಏರುವ ಅನಿವಾರ್ಯತೆ ಇದೆ.

ಧರ್ಮಸ್ಥಳ ಬಸ್‌ನಲ್ಲಿ ಮಂಗಳೂರಿಂದ ಬಿ.ಸಿ.ರೋಡ್ ತನಕ ತೆರಳುವ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿರುತ್ತದೆ. ಹೀಗಾಗಿ ಮಂಗಳೂರಿನಿಂದ ನೇರ ಧರ್ಮಸ್ಥಳಕ್ಕೆ ಹೋಗಲು ಬಯಸುವವರು ಪ್ರಯಾಣಿಕರ ದಟ್ಟಣೆ ಕಂಡು ಬಸ್ಸನ್ನು ಏರುವುದಿಲ್ಲ. ಹಾಗಾಗಿ ಜ್ಯೋತಿ, ಕಂಕನಾಡಿ, ಪಂಪ್‌ವೆಲ್ ಮತ್ತು ಪಡೀಲ್ ಬಸ್ ನಿಲ್ದಾಣದಲ್ಲಿ ಜನರನ್ನು ಹತ್ತಿಸಿದ ಬಳಿಕ ಎಕ್ಸ್‌ಪ್ರೆಸ್ ಮಾದರಿಯಲ್ಲಿ ನೇರವಾಗಿ ಬಿ.ಸಿ.ರೋಡ್ ಫ್ಲೈಓವರ್ ಮೇಲಿಂದ ಬಂಟ್ವಾಳ ಬೈಪಾಸ್‌ಗೆ ಹೋಗುವುದಾಗಿ ಪ್ರಯಾಣಿಕರಿಗೆ ಮೊದಲೇ ತಿಳಿಸಿದರೆ ಉತ್ತಮ. ಶರ್ಲಿನ್ ಪ್ರೀತಿ, ಬಂಟ್ವಾಳ ಪ್ರಯಾಣಿಕರು ಕೆಲಸ ಮುಗಿಸಿ ಮನೆಗೆ ಹೋಗುವಾಗ ಕಂಕನಾಡಿ ಬಸ್ ಸ್ಟಾಪಲ್ಲಿ ಕನಿಷ್ಠ 5ರಿಂದ 10 ಮಂದಿ ಧರ್ಮಸ್ಥಳ ಕಡೆಗೆ ತೆರಳುವವರು ಇರುತ್ತಾರೆ. ಬಸ್ ಪ್ರಯಾಣಿಕರಿಂದ ತುಂಬಿರುವುದರಿಂದ ಇಲ್ಲಿ ಸ್ಟಾಪ್ ಕೊಡುವುದೇ ಇಲ್ಲ. ಹಾಗಾಗಿ ಮತ್ತೆ 15ರಿಂದ 20 ನಿಮಿಷ ಕಾಯಬೇಕು. ಬಸ್ ಬಂದರೂ, ಮುಂದಿನ ಬಾಗಿಲಲ್ಲೇ ಬಸ್ಸನ್ನು ಏರಬೇಕಾಗುತ್ತದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಮಹಿಳೆಯರಿಗೆ ಕಿರಿಕಿರಿ. 30 ನಿಮಿಷಕ್ಕೆ ಒಂದು ಎಕ್ಸ್‌ಪ್ರೆಸ್ ಬಸ್ ಇದ್ದರೂ, ಬಿ.ಸಿ.ರೋಡ್ ಕಡೆಗೆ ತೆರಳುವವರೇ ಹೆಚ್ಚು. ಹೀಗಾಗಿ ಬೆಳಗ್ಗೆ ಮತ್ತು ಸಂಜೆ ಎಕ್ಸ್‌ಪ್ರೆಸ್ ಬಸ್‌ಗಳನ್ನು 15 ನಿಮಿಷಕ್ಕೆ ಒಂದರಂತೆ ಹಾಕಿದರೆ ಉತ್ತಮ. ವೀಣಾ ಪುಂಜಾಲಕಟ್ಟೆ, ಪ್ರಯಾಣಿಕರು ಧರ್ಮಸ್ಥಳ-ಮಂಗಳೂರು ರೂಟ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ ಇದೆ. ಬೆಳಗ್ಗೆ ಹಾಗೂ ಸಂಜೆ ಬಸ್‌ಗಳಲ್ಲಿ ಪಿಕಪ್ ಸಾಧ್ಯವಾಗದೆ ಇರಬಹುದು. ಬಸ್‌ಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ನಿಗದಿತ ನಿಲ್ದಾಣದಲ್ಲೇ ನಿಲ್ಲಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಲಾಗಿದೆ. ರಾಜೇಶ್ ಶೆಟ್ಟಿ, ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ https://www.vijayavani.net/progress-review-of-110-kv-line-construction https://www.vijayavani.net/protest-164

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net