

ಸುಳ್ಯ: ಸುಳ್ಯ ರೋಟರಿ ಕ್ಲಬ್ ವತಿಯಿಂದ ಸುಳ್ಯದ ನಾಲ್ವರು ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ ಅವಾರ್ಡ್ ಪ್ರದಾನ ಮಾಡಲಾಯಿತು. ಸುಳ್ಯ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ., ಬೆಳ್ಳಾರೆ ಜ್ಞಾನಗಂಗಾ ಪಬ್ಲಿಕ್ ಸ್ಕೂಲ್ನ ಶಿಕ್ಷಕಿ ಸುಜಾತ ಪ್ರಸನ್ನ ಕಲ್ಲಾಜೆ, ರೋಟರಿ ಪ್ರೌಢಶಾಲೆಯ ಶಿಕ್ಷಕಿ ನಳಿನಾಕ್ಷಿ ಕಲ್ಮಡ್ಕ, ರೋಟರಿ ಪ್ರಾಥಮಿಕ ಶಾಲಾ ಶಿಕ್ಷಕಿ ರಶ್ಮಿ ಎಸ್.ಎನ್.ಪುರಸ್ಕಾರಕ್ಕೆ ಭಾಜನರಾದರು.
ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ.ರಾಮ್ ಮೋಹನ್, ನಿವೃತ್ತ ಪ್ರಾಧ್ಯಾಪಕ ಬೆಳ್ಯಪ್ಪ ಗೌಡ, ನಿಕಟಪೂರ್ವ ಅಧ್ಯಕ್ಷ ಆನಂದ ಖಂಡಿಗ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪೇರಾಲು, ಗಿರಿಜಾಶಂಕರ ತುದಿಯಡ್ಕ ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲ ಶಿಕ್ಷಕರನ್ನು ಗೌರವಿಸಲಾಯಿತು. ಚಂದ್ರಮತಿ ಪ್ರಾರ್ಥಿಸಿ, ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಸ್ವಾಗತಿಸಿದರು. ಡಾ. ವೆಂಕಟೇಶ್ ಸನ್ಮಾನಿತರನ್ನು ಪರಿಚಯಿಸಿದರು. ರೋಟರಿ ಕಾರ್ಯದರ್ಶಿ ಡಾ.ಹರ್ಷಿತ ಪುರುಷೋತ್ತಮ ವಂದಿಸಿದರು.