

ಮಂಗಳೂರು: ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್‌್ಟ ತನ್ನ ಕಾರ್ಯಚಟುವಟಿಕೆಗಳ ಮೂಲಕ ಹಲವು ಮಹತ್ತರ ಸಾಧನೆ ಮಾಡುತ್ತಲೇ ಇದೆ. ಅಮೆರಿಕದಲ್ಲಿ ಯಕ್ಷಗಾನದ ಸವಿರುಚಿಯಲ್ಲಿ ಆಸಕ್ತ ಪ್ರೇಕ್ಷಕರಿಗೆ ಉಣಬಡಿಸುವುದಲ್ಲದೆ, ಅಲ್ಲಿನ ನಿವಾಸಿಗಳಿಗೂ ಈ ಶ್ರೀಮಂತ ಕಲೆಯನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಟ್ರಸ್ಟ್ ನ ಕಾರ್ಯಚಟುವಟಿಕೆಗಳನ್ನು ಗಮನಿಸಿ ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದ ಫೀನಿಕ್‌್ಸ ನಗರದ ಮೇಯರ್ ಜುಲೈ 27 ನೇ ತಾರೀಕನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿತ್ತು. ಈಗ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್ಫೀಲ್‌್ಡ ನಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಅಲ್ಲಿನ ಮೇಯರ್ ಸ್ಟೀವನ್ ವಿ ಪೋಂಟೋ ಅವರು ಕೂಡ ಆಗಸ್‌್ಟ 18ನೇ ತಾರೀಕನ್ನು ಬ್ರೂಕ್ಫೀಲ್‌್ಡ ನಗರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಫೌಂಡೇಶನ್ ಕೈಗೊಂಡಿರುವ ಮಹಾನ್ ಕಾರ್ಯವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಅಮೆರಿಕದಲ್ಲಿ ಇಂಥ ಸಾಧನೆ ಮಾಡಲು ಟ್ರಸ್‌್ಟಗೆ ಮಹತ್ತರ ಸಹಾಯ ಮಾಡಿದ್ದು ಮಿಲ್ವಾಕೀ ಕನ್ನಡ ಸಂಘ. ಅದಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೃತಜ್ಞತೆ ಸಲ್ಲಿಸಿದೆ. ಸ್ಟೀವನ್ ವಿ ಪೋಂಟೋ ಅವರು ನೀಡಿದ ಅಭಿನಂದನಾ ಪತ್ರದಲ್ಲಿ ಟ್ರಸ್‌್ಟನ ಚಟುವಟಿಕೆಗಳಲ್ಲಿ ಪ್ರಧಾನವಾದ ಕೆಲವನ್ನು ಉಲ್ಲೇಖಿಸಿರುವುದು ಈ ಟ್ರಸ್ನ್ ನ ಪ್ರತಿಯೊಬ್ಬರೂ ಮಾಡಿರುವ ಶ್ರಮಕ್ಕೆ ಸಿಕ್ಕ ಫಲ ಎಂದು ಹೇಳಲಾಗುತ್ತಿದೆ.