ಪ್ರಾಪಂಚಿಕ ಜ್ಞಾನದಲ್ಲಿ ಪಾರಮ್ಯದಿಂದ ಯಶಸ್ಸು: ಶಾಸಕ ಉವಾನಾಥ ಎ.ಕೋಟ್ಯಾನ್ ಕಿವಿಮಾತು

New Project (21)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ವಿದ್ಯೆಯ ಜತೆಗೆ ಕ್ರೀಡೆ ಹಾಗೂ ಪ್ರಾಪಂಚಿಕ ಜ್ಞಾನದಲ್ಲಿ ಪಾರಮ್ಯ ಗಳಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಉವಾನಾಥ ಎ.ಕೋಟ್ಯಾನ್ ಹೇಳಿದರು.

ಮೂಲ್ಕಿ ಶ್ರೀ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ 45ನೇ ವಾರ್ಷಿಕ ಸಮಾರಂಭ ಗುರುವಾರ ಉದ್ಘಾಟಿಸಿ ವಾತನಾಡಿದರು.

ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮ ಮಂಡಳಿ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ವಾತನಾಡಿ, ಗ್ರಾಮೀಣ ಹಿನ್ನೆಲೆಯ ಮಕ್ಕಳಿಗಾಗಿ 45 ವರ್ಷಗಳ ಹಿಂದೆ ಆಂಗ್ಲ ವಾದ್ಯಮ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದೇ ಚರಿತ್ರಾರ್ಹ ಸಾಧನೆ. ಶಾಲೆ ಇಂದಿಗೂ ಗುಣಮಟ್ಟ ಕಾಪಿಟ್ಟುಕೊಂಡು ಸವಾಜಕ್ಕೆ ಕೊಡುಗೆ ನೀಡುತ್ತಾ ಬಂದಿರುವುದು ಅಭಿನಂದನೀಯ ಎಂದರು.

ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೇ.100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಸಾಧಕ ಶಿಕ್ಷಕರನ್ನು ಗೌರವಿಸಲಾಯಿತು. ಮೂಲ್ಕಿ ಲಲಿತಾ ಆರ್.ಸಾಲ್ಯಾನ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ಆರ್.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು, ಮೂಲ್ಕಿ ಬಿಲ್ಲವ ಸವಾಜ ಸೇವಾ ಸಂದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಹೆಜವಾಡಿ ಬಿಲ್ಲವ ಸವಾಜ ಸೇವಾ ಸಂದ ಅಧ್ಯಕ್ಷ ಮೋಹನ್‌ದಾಸ್ ಹೆಜ್ಮಾಡಿ ಭಾಗವಹಿಸಿದ್ದರು.

ಶಾಲಾ ಸಂಚಾಲಕ ಹರೀಂದ್ರ ಸುವರ್ಣ, ಟ್ರಸ್ಟಿಗಳಾದ ಅವಿನಾಶ್ ಎಚ್.ಕೋಟ್ಯಾನ್, ಯೋಗೀಶ್ ಕೋಟ್ಯಾನ್ ಮತ್ತು ಪ್ರಜ್ಞಾ ಎ.ಕೋಟ್ಯಾನ್, ಪಿ.ಟಿ.ಎ. ಅಧ್ಯಕ್ಷ ದಿವಾಕರ್, ಕಾಲೇಜು ವಿಭಾಗದ ಸಿ.ಪಿ.ಎಲ್. ಆರ‌್ಯನ್, ಪ್ರೌಢ ಶಾಲಾ ವಿಭಾಗದ ಎಸ್.ಪಿ.ಎಲ್. ಕಾರ್ತಿಕ್, ಪ್ರಾಥಮಿಕ ಶಾಲಾ ವಿಭಾಗದ ಎಸ್.ಪಿ.ಎಲ್. ಯಶ್ ಎನ್.ಕೋಟ್ಯಾನ್ ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಮಂಜುಳಾ ಕೆ.ವಿ. ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ ವರದಿ ವಾಚಿಸಿದರು. ಶಿಕ್ಷಕರಾದ ಪವಿತ್ರಾ ಮತ್ತು ಪೃಥ್ವೀರಾಜ್ ನಿರ್ವಹಿಸಿದರು. ಪ್ರಿನ್ಸಿಪಾಲ್ ಯತೀಶ್ ಅಮೀನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net