

ಗುರುಪುರ: ಮಂಗಳೂರು ನಗರ ಪಾಲಿಕೆಯ ವಾರ್ಡ್ 15ರ ಕುಂಜತ್ತಬೈಲು ದಕ್ಷಿಣದಲ್ಲಿ 39 ಲಕ್ಷ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ಗಾಂಧಿನಗರ-ಪಳನೀರು ರಸ್ತೆ, ಕಾಲೇಜು ರಸ್ತೆ ಅಭಿವೃದ್ಧಿ, ಗಾಂಧಿನಗರ ಪ್ರಮೋದ್ ಮನೆ ಬಳಿ ಇಂಟರ್‌ಲಾಕ್ ಅಳವಡಿಕೆ, ಪಳನೀರು ನಾರಾಯಣ ಗುರು ಮಂದಿರದ ಬಳಿ ರಸ್ತೆ ಅಭಿವೃದ್ಧಿ ಸಹಿತ ಒಟ್ಟು 39 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಶಾಸಕರು ಮನಪಾ ಮೇಯರ್ ಮನೋಜ್ ಕುಮಾರ್ ಜತೆಗೂಡಿ ಚಾಲನೆ ನೀಡಿದರು.
ಮನಪಾ ಕಾರ್ಪೊರೇಟರ್ ಸುಮಂಗಳಾ ರಾವ್, ಮಂಡಲ ಕಾರ್ಯದರ್ಶಿ ರಣದೀಪ್ ಕಾಂಚನ್, ಕಾವೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶೀತೇಶ್ ಕೊಂಡೆ, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾಕ್ಷಾತ್ ಶೆಟ್ಟಿ, ಕಾವೂರು ವಾರ್ಡ್ ಅಧ್ಯಕ್ಷ ಅಜಿತ್ ಕಾವೂರು, ಕಾರ್ಯದರ್ಶಿ ಉದಯಚಂದ್ರ, ನವೀನ್ ಶಾಂತಿನಗರ, ಪ್ರಕಾಶ್, ಸದಾಶಿವ ಪೂಜಾರಿ, ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.