ನಾರಾಯಣ ಮಯ್ಯರ ಚಿಂತನೆ ಮಾದರಿ

nudi
Published on

ಕೋಟ: ನಾರಾಯಣ ಮಯ್ಯರ ಚಿಂತನೆ ಹಾಗೂ ಅವರ ಕಾರ್ಯವೈಕರಿ ಯುವ ಸಮೂಹಕ್ಕೆ ಮಾದರಿ ಎಂದು ಸೇವಾ ಸಂಗಮ ಶಿಶು ಮಂದಿರ ಕೋಟ ಅಧ್ಯಕ್ಷ ಕೆ.ಶ್ರೀಕಾಂತ್ ಶೆಣೈ ಹೇಳಿದರು.

ಇತ್ತೀಚೆಗೆ ನಿಧನರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತಮಣೂರು ನಾರಾಯಣ ಮಯ್ಯ ಅವರಿಗೆ ಕೋಟ ಸೇವಾಸಂಗಮ ಶಿಶುಮಂದಿರದಲ್ಲಿ ಶುಕ್ರವಾರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಡನಾಡಿಗಳಾದ ಗೀತಾ ಹೆಗ್ಡೆ, ಲಕ್ಷ್ಮೀ, ವಸುಧಾ ಪ್ರಭು, ಭಾಗ್ಯವಾದಿರಾಜ್, ಸೇವಾಸಂಗಮ ಶಿಶುಮಂದಿರ ಆಡಳಿತ ಸಮಿತಿ ನಿರ್ಗಮಿತ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ, ಸದಸ್ಯರಾದ ರವೀಂದ್ರ ಕೋಟ, ಚಂದ್ರಿಕಾ ಭಟ್, ರೇಣುಕಾ ಮಯ್ಯ, ಸವಿತಾ ಅಡಿಗ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net