ರಂಗಪ್ರೇರಣ ತಂಡದಿಂದ ನಾಣಿ ನಾರಾಯಣ

nataka
ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳು ನಾಣಿ ನಾರಾಯಣ ನಾಟಕ ಪ್ರದರ್ಶಿಸಿದರು.
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭಗೊಂಡ ರಂಗಪ್ರೇರಣ ನಾಟಕ ತಂಡದ ಹೊಸ ನಾಟಕ ನಾಣಿ ನಾರಾಯಣದ ಪ್ರಥಮ ಪ್ರದರ್ಶನ ಬುಧವಾರ ವಿದ್ಯಾಲಯದಲ್ಲಿ ನಡೆಯಿತು. ಪ್ರದರ್ಶನದ ಉದ್ಘಾಟನೆಯನ್ನು ನಿವೃತ್ತ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಅತ್ಯಾಡಿ ನೆರವೇರಿಸಿದರು.

ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದರು. ಬಾಲ ಕಲಾವಿದರ ಮನೋಜ್ಞ ಅಭಿನಯವು ಕಲಾಸಕ್ತರ ವಿಶೇಷ ಮನ್ನಣೆಗೆ ಪಾತ್ರವಾಯಿತು.

ಈ ನಾಟಕದ ರಂಗ ರೂಪ ವಿಧೇಯನ್, ಸಾಹಿತ್ಯ ಸುರೇಶ್ ಬಾಳಿಲ, ಸಂಗೀತ ದಿವಾಕರ್ ಕಟೀಲು ಹಾಗೂ ಗೌತಮ್ ಬಿರುವ, ನಿರ್ದೇಶನ ವಿದ್ದು ಉಚ್ಚಿಲ ನೆರವೇರಿಸಿದ್ದರು.

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಶಾಲಾ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್., ಸಂಚಾಲಕ ಚಂದ್ರಶೇಖರ್ ನಾಯರ್, ಮುಖ್ಯಶಿಕ್ಷಕಿ ವಿದ್ಯಾರತ್ನ ಹಾಗೂ ರಂಗಪ್ರೇರಣ ನಾಟಕ ತಂಡದ ಸಂಯೋಜಕ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net