ಯುವಕನನ್ನು ಎಳೆದ ಸುಬ್ರಹ್ಮಣ್ಯ ದೇವಸ್ಥಾನದ ಆನೆ

sub aane
ಯುವಕನನ್ನು ಎಳೆದ ಆನೆ
Published on

ಸುಬ್ರಹ್ಮಣ್ಯ (ದ.ಕ.): ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ, ಯುವಕನೊಬ್ಬನನ್ನು ತನ್ನ ಸೊಂಡಿಲಿನಿಂದ ಎಳೆದ ಘಟನೆ ಮಂಗಳವಾರ ನಡೆದಿದೆ.
ಸುಬ್ರಹ್ಮಣ್ಯದ ಸವಾರಿ ಮಂಟಪದ ಹತ್ತಿರದ ಬಳಿ ದೇವಸ್ಥಾನದ ಆನೆ ನಿಂತಿತ್ತು. ಈ ವೇಳೆ ಒಂದಿಬ್ಬರು ಆನೆಯ ಬಳಿ ನಿಂತು ಪೋಟೋ ತೆಗೆಯಲು ಮುಂದಾದರು. ಇದೇ ವೇಳೆಗೆ ಸುಬ್ರಹ್ಮಣ್ಯದ ಲಾಡ್ಜ್ ಒಂದರ ರೂಂ ಬಾಯ್ ಆನೆಯ ಹತ್ತಿರ ಬಂದಾಗ, ತಕ್ಷಣ ಆನೆ ತನ್ನ ಸೊಂಡಿಲಿನಿಂದ ಎಳೆದು ಹಾಕಿದೆ. ಸ್ಥಳೀಯರೊಬ್ಬರು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಯುವಕ ಮದ್ಯ ಸೇವಿಸಿದ್ದ ಎನ್ನಲಾಗಿದ್ದು, ಅಲ್ಲಿಂದ ತೆರಳಲು ಸೂಚಿಸಲಾಗಿತ್ತು. ಯಾವುದೇ ಅಪಾಯ ಸಂಭವಿಸಿಲ್ಲ. ಮದ್ಯ ಸೇವಿಸಿದವರು ಆನೆ ಬಳಿಗೆ ಬಂದರೆ ಆನೆ ಕೋಪಗಳ್ಳುವುದು ಸಹಜ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net