ನಂದಿಕೂರು ದೇಗುಲ ವರ್ಷಾವಧಿ ಮಹೋತ್ಸವ ಸಂಪನ್ನ

ratha
Published on

ಪಡುಬಿದ್ರಿ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವರ್ಷಾವಧಿ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು.

ಕ್ಷೇತ್ರದ ತಂತ್ರಿ ಕೇಂಜ ಶ್ರೀಧರ ಮಾರ್ಗದರ್ಶನದಲ್ಲಿ ಬೆಳಗ್ಗೆ ನವಕ ಕಲಶಾಭಿಷೇಕ, ಮಹಾಪೂಜೆ ಸಹಿತ ವಿವಿಧ ಧಾರ್ಮಿಕ ವಿಧಿಗಳ ಬಳಿಕ ರಥಾರೋಹಣ ನಡೆಯಿತು. ಉತ್ಸವ ಅಂಗವಾಗಿ ದೇವರು ಹಾಗೂ ದೇಗುಲವನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಧ್ವರಾಯ ಭಟ್, ಅರ್ಚಕರಾದ ವಿದ್ವಾನ್ ಎನ್.ಜನಾರ್ದನ ಭಟ್, ಎನ್.ವೆಂಕಟೇಶ ಪುರಾಣಿಕ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎನ್.ಜನಾರ್ದನ ಭಟ್, ವಸಂತ ಶೆಟ್ಟಿ, ವಿಮಲಾ ಬಿ.ಶೆಟ್ಟಿ, ಲಕ್ಷ್ಮಣ ಶೆಟ್ಟಿವಾಲ್ ಅಡ್ವೆ ಅರಂತಡೆ, ಸುಂದರ, ಬಾಲಕೃಷ್ಣ ಸಾಲ್ಯಾನ್, ಪ್ರೇಮಾ ರವಿ ದೇವಾಡಿಗ, ಅಡ್ವೆ, ನಂದಿಕೂರು, ಉಳ್ಳೂರು, ಕೊಳಚೂರು ಗ್ರಾಮಸ್ಥರು, ಸಿಬ್ಬಂದಿ ಪಾಲ್ಗೊಂಡಿದ್ದರು.

*ಗಮನ ಸೆಳೆದ ಪುಷ್ಪಾಲಂಕಾರ: ಪ್ರತಿ ವರ್ಷ ಒಂದಿಲ್ಲೊಂದು ಸಂಸ್ಕೃತಿ ಬಿಂಬಿಸುವ ಪುಷ್ಪಾಲಂಕಾರ ಮಾಡುತ್ತಿರುವ ನಂದ್ಯೂರಮ್ಮನ ಭಕ್ತ ಸೇವಾ ವೃಂದದವರಿಂದ ಈ ಬಾರಿ ಹಣ್ಣು ಹಂಪಲು ಹಾಗೂ ವಿಶೇಷ ಹೂ ಬಳಸಿ ರಚಿಸಿದ್ದ ಅಲಂಕಾರ ಭಕ್ತರ ಗಮನ ಸೆಳೆಯಿತು. ಹಳದಿ, ಆರೆಂಜ್ ಗೊಂಡೆ, ಕಾಕಡ, ಕನಕಾಂಬರ, ಅಯ್ಯಪ್ಪ ಹೂವು, ಸೈಪ್ರಸ್ ಹೂವು, ಸೇವಂತಿಗೆ, ಕೆಂಪು ಎಸ್ಟರ್ ಹೂವು, ಹಳದಿ ಹೂವು, ವಿಶೇಷ ಜಾಲರಿ, ಬಾಳೆ ಹಣ್ಣು, ನಿಂಬೆ, ಡ್ರಾೃಗನ್ ಹಣ್ಣು ಸಹಿತ ವಿವಿಧ ಹಣ್ಣು ಬಳಸಿ ರಚಿಸಿದ ದೇವಳ ಪ್ರವೇಶ ದ್ವಾರ, ತೀರ್ಥ ಮಂಟಪ ಮುಂಭಾಗದಲ್ಲಿನ ಅಲಂಕಾರ ಸೇರಿದಂತೆ ಗರ್ಭಗುಡಿ ದ್ವಾರದಲ್ಲಿ ಹೂವಿನಿಂದ ರಚಿಸಿದ ನವಿಲಿನ ಅಲಂಕಾರ ನೋಡುಗರನ್ನು ಆಕರ್ಷಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net