ಸಹಕಾರಿ ವ್ಯವಸ್ಥೆ ಬೆಳವಣಿಗೆಗೆ ಪೂರಕ ಕಾಯ್ದೆ

shakari
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಸಹಕಾರಿ ಸಂಘಗಳು, ಸಹಕಾರಿ ವ್ಯವಸ್ಥೆ ಬೆಳವಣಿಗೆಗೆ ಪೂರಕವಾಗುವ ಕಾಯ್ದೆ, ಕಾನೂನಿಗೆ ಬೆಂಬಲವಿದೆ. ಆದರೆ ಸಹಕಾರ ಸಂಘಗಳಿಗೆ ಮಾರಕವಾಗುವ ಕಾಯ್ದೆಗಳಿಗೆ ನಮ್ಮೆಲ್ಲರ ವಿರೋಧವಿದೆ. ಈ ಬಗ್ಗೆ ನಾವು ಅರಿತುಕೊಳ್ಳುವ ಅಗತ್ಯತೆಯಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಕಾಪುವಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ, ಸಹಕಾರ ಇಲಾಖೆ ಉಡುಪಿ ಆಶ್ರಯದಲ್ಲಿ ಉಡುಪಿ ಮತ್ತು ಕಾಪು ತಾಲೂಕಿನ ಇತರ ಸಹಕಾರ ಸಂಘ ಅಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಾಹಕರಿಗಾಗಿ ಜಿಲ್ಲಾಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಪು ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಎಂಜಿಎಂ ಕಾಲೇಜಿನ ಆಡಳಿತ ಶಾಸ್ತ್ರ ವಿಭಾಗ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಮೂಡುಬಿದಿರೆ ಕೆಐಸಿಎಂ ಉಪನ್ಯಾಸಕಿ ಬಿಂದು ಬಿ.ನಾಯರ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಪ್ರಸಾದ್ ಶೆಟ್ಟಿ ಕುತ್ಯಾರು, ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ಸುಧೀರ್ ಕುಮಾರ್ ವೈ., ಅಲೆವೂರು ಹರೀಶ್ ಕಿಣಿ, ಕಾಪು ವ್ಯವಸಾಯ ಸೇವಾ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ ಶೆಟ್ಟಿ ಉಪಸ್ಥಿತರಿದ್ದರು.

ಕುಂದಾಪುರ ಉಪವಿಭಾಗ ಸಹಕಾರ ಸಂಘ ಸಹಾಯಕ ನಿಬಂಧಕಿ ಸುಕನ್ಯಾ ಪ್ರಸ್ತಾವಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ನಿರೂಪಿಸಿದರು.

ಮಹಿಳೆಯರು, ಯುವಕರು, ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮೂಲಕ ಜನರ ಬೆನ್ನೆಲುಬಾಗಿರುವ ಸಹಕಾರಿ ವ್ಯವಸ್ಥೆಯೊಳಗೆ ಮೀಸಲಾತಿ ತುರುಕಿಸುವ ಪ್ರಯತ್ನ ನಡೆಯಿತ್ತಿರುವುದು ಆಘಾತಕಾರಿ ವಿಚಾರ. ಇಂತಹ ಹುನ್ನಾರ, ಪೈಪೋಟಿ ವಿರುದ್ಧ, ಸಹಕಾರಿಗಳ ವಿರುದ್ಧ ಮಂಡಿಸುವ ಬಿಲ್ ಬಗ್ಗೆ ಸಹಕಾರಿಗಳೆಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ. -ದೇವಿಪ್ರಸಾದ್ ಶೆಟ್ಟಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ https://www.vijayavani.net/necessary-steps-for-electricity-supply https://www.vijayavani.net/raju-mendon-elected-as-president

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net