

ಕುಂದಾಪುರ: ಮೆಸ್ಕಾಂ ತಲ್ಲೂರು ಉಪವಿಭಾಗ ಜನಸಂಪರ್ಕ ಸಭೆ ತಲ್ಲೂರು ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಮೆಸ್ಕಾಂ ಕುಂದಾಪುರ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ಅಧ್ಯಕ್ಷತೆ ವಹಿಸಿದ್ದರು.
ಮಳೆಗಾಲ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಇನ್ನಿತರ ವಿಚಾರಗಳು ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಗಂಗೊಳ್ಳಿಯಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಗಂಗೊಳ್ಳಿ 33 ಕೆವಿ ಸಬ್‌ಸ್ಟೇಶನ್ ಹಾಗೂ ವಿದ್ಯುತ್ ಮಾರ್ಗದ ನಿರ್ವಹಣೆ ಬೇರೆ ಗುತ್ತಿಗೆದಾರರಿಗೆ ನೀಡಲಾಗಿದ್ದು, ಅವರಿಗೆ ಸ್ಪಷ್ಟ ಸೂಚನೆ ಈಗಾಗಲೇ ನೀಡಲಾಗಿದೆ. ತಲ್ಲೂರು ಮಾರ್ಗದಲ್ಲಿ ಸಮಸ್ಯೆಗಳಿದ್ದರೆ, ನಾವುಂದ ಮಾರ್ಗದ ಮೂಲಕ ವಿದ್ಯುತ್ ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ ಎಂದು ಯಶವಂತ ತಿಳಿಸಿದರು.
ಕುಂದಾಪುರ ವಿಭಾಗ ಲೆಕ್ಕಾಧಿಕಾರಿ ಶಿವಕುಮಾರ್, ತಲ್ಲೂರು ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಕುಮಾರ್, ಸಹಾಯಕ ಇಂಜಿನಿಯರ್ ತಲ್ಲೂರು ಶಿವಾನಂದ ನಾಯ್ಕ, ತಲ್ಲೂರು ಶಾಖಾಧಿಕಾರಿ ಸುರೇಶ ಬಾಬು, ವಂಡ್ಸೆ ಶಾಖಾಧಿಕಾರಿ ರಾಜೇಶ್, ನಾಡಾ ಶಾಖಾಧಿಕಾರಿ ವಿಜಯ ಕುಮಾರ್, ಗಂಗೊಳ್ಳಿ ಶಾಖಾಧಿಕಾರಿ ದಿನೇಶ ಶೆಟ್ಟಿ, ಮೇಲ್ವಿಚಾರಕರಾದ ಜಾಫರ್ ಮಕಂದರ್, ವಿಶ್ವನಾಥ ವೇಲ್ವಾಪುರ, ಚಂದ್ರಶೇಖರ, ವಾಸು ಮರಾಟಿ, ಮೆಸ್ಕಾಂ ಉಪವಿಭಾಗದ ವಿವಿಧ ಗ್ರಾಮಗಳ ಗ್ರಾಹಕರು ಉಪಸ್ಥಿತರಿದ್ದರು.