

ಚಿಕ್ಕಬಳ್ಳಾಪುರ: ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಬರೋಬ್ಬರಿ ಐದೂವರೆ ತಿಂಗಳಿಂದ ಕಂಪ್ಲೀಟ್ ಲಾಕ್ ಆಗಿದ್ದ ವಿಶ್ವವಿಖ್ಯಾತ ನಂದಿಗಿರಿಧಾಮ ಇಂದಿನಿಂದ (ಸೆ.7) ಅನ್‌ಲಾಕ್ ಆಗಿದೆ.
ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಾ.14ರಿಂದಲೇ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶಿಸಿತ್ತು. ಹೀಗಾಗಿ ಸರಿಸುಮಾರು ಐದೂವರೆ ತಿಂಗಳ ಬಳಿಕ ನಂದಿಬೆಟ್ಟ ಪ್ರವೇಶಿಸಲು ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ನಂದಿಗಿರಿಧಾಮದ ಚೆಕ್‌ಪೋಸ್ಟ್ ತೆಗೆದಿದ್ದೇ ತಡ ಮುಂಜಾನೆಯಿಂದಲೇ ಕಾತುರದಿಂದ ಕಾಯುತ್ತಿದ್ದ ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆಯಿಟ್ಟರು. ಆದರೆ, ಮಾಸ್ಕ್ ಮರೆತು ಬಂದ ಪ್ರವಾಸಿಗರಿಗೆ ದಂಡದ ಪೆಟ್ಟು ಬಿತ್ತು!
ಇದನ್ನೂ ಓದಿರಿ ಓಪನ್ ಏರ್ ಥಿಯೇಟರ್ ಪಾರ್ಟಿಯಲ್ಲೂ ಡ್ರಗ್ಸ್ ನಶೆ!
ಒಟ್ಟಾರೆ ಹಲವು ತಿಂಗಳ ಬಳಿಕ ಸ್ನೇಹಿತರು, ಕುಟುಂಬಸ್ಥರೊಂದಿಗೆ ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರು ಪ್ರಕೃತಿಯ ಸೊಬಗು ಸವಿದು ಖುಷಿಪಟ್ಟರು.