

ಬಂಟ್ವಾಳ: ನರಿಕೊಂಬು ಓಂ ಶ್ರೀ ಮಹಿಳಾ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ಇದರ ನೂತನ ಅಧ್ಯಕ್ಷೆಯಾಗಿ ನಳಿನಿ ಶುಭಕರ ಆಯ್ಕೆಯಾಗಿದ್ದಾರೆ. ನಾಯಿಲ ಓಂ ಶ್ರೀ ಗೆಳೆಯರ ಬಳಗದ ಕಚೇರಿಯಲ್ಲಿ ಅಧ್ಯಕ್ಷ ಕಿರಣ್ ಅಟ್ಲೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ನಳಿನಿ ಉಮೇಶ್, ಉಪಾಧ್ಯಕ್ಷೆಯಾಗಿ ದೀಪಾ ವೆಂಕಪ್ಪ, ಕಾರ್ಯದರ್ಶಿಯಾಗಿ ಮೋಹಲತಾ ಹರೀಶ್, ಕೋಶಾಧಿಕಾರಿಯಾಗಿ ಸುಮತಿ ಆಯ್ಕೆಯಾಗಿದ್ದಾರೆ. ಓಂಶ್ರೀ ಗೆಳೆಯರ ಬಳಗದ ಕಾರ್ಯದರ್ಶಿ ರಾಜೇಶ್ ಮರ್ದೋಳಿ, ಉಪಾಧ್ಯಕ್ಷ ರಾಜೇಶ್ ಕೋಟ್ಯಾನ್, ಸದಸ್ಯರಾದ ಉಮೇಶ್, ಹರೀಶ್, ವೆಂಕಪ್ಪ ಉಪಸ್ಥಿತರಿದ್ದರು. ಮಹಿಳಾ ಮಂಡಳಿಯ ನೂತನ ಕಾರ್ಯದರ್ಶಿ ಮೋಹಲತಾ ಸ್ವಾಗತಿಸಿ, ವಂದಿಸಿದರು.