

ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ ನಾಗನ ಸಾನ್ನಿಧ್ಯದಲ್ಲಿ ಮಂಗಳವಾರ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಪಡಿಕ್ಕಲ್ಲು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಆಡಳಿತ ಮೊಕ್ತೇಸರ ಚಂದ್ರಶೇಖರ ಏತಡ್ಕ, ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ ಅಧ್ಯಕ್ಷ ಬಾಲಕೃಷ್ಣ ಕೆ.ಕೆ.ಕುಂಡಾಪು, ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಶ್ಯಾಮಲಾ, ಶ್ರೀ ಜಠಾಧಾರಿ ಮೂಲಸ್ಥಾನ ಮಲೆತ್ತಡ್ಕ ಅಧ್ಯಕ್ಷ ರಾಧಾಕೃಷ್ಣ, ಆಡಳಿತ ಮೊಕ್ತೇಸರ ಚಂದ್ರಶೇಖರ ಏತಡ್ಕ ಹಾಗೂ ಡಾ.ಪ್ರಕಾಶ ವೈ.ಎಚ್., ಮೊಕ್ತೇಸರ ವೈ.ವಿ.ಸುಬ್ರಹ್ಮಣ್ಯ, ಶ್ರೀ ನಾಗರಕ್ತೇಶ್ವರಿ ದೈವಸ್ಥಾನ ಗದ್ದೆಮನೆ ಏತಡ್ಕ ಖಜಾಂಜಿ ಮುರಳಿಕೃಷ್ಣ ಮಾಣಿತ್ತೋಡಿ ಉಪಸ್ಥಿತರಿದ್ದರು. ಬಳಿಕ ಬಿಲ್ವಪತ್ರೆ ಗಿಡ ವಿತರಿಸಲಾಯಿತು.