

ಬೆಳ್ತಂಗಡಿ: ನಾಗರಪಂಚಮಿ ಪ್ರಯುಕ್ತ ತಾಲೂಕಿನ ಮುಗ್ಗ ಗುತ್ತಿನ ನಾಗ ಸಾನ್ನಿಧ್ಯದಲ್ಲಿ ತನು ತಂಬಿಲ ಸೇವೆ ನಡೆಯಿತು.
ನಾಗಬಿಂಭಗಳನ್ನು ಅರಶಿನಯುಕ್ತ ಕಲಶಾಭಿಷೇಕದ ಮೂಲಕ ಶುದ್ಧೀಕರಿಸಿ ಪಂಚಾಮೃತ ಅಭಿಷೇಕ ನಡೆಯಿತು. ಬಳಿಕ ನಾಗದೇವರಿಗೆ ತಂಬಿಲ, ಮಹಾಪೂಜೆ ನಡೆಯಿತು.
ರಘುನಾಥ ಶಾಂತಿ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಬಳಿಕ ವಾರ್ಷಿಕ ಮಹಾಸಭೆ ನಡೆದು ದುರ್ಗಾಂಬಿಕಾ ದೇವಿಯ ಮಹಾಪೂಜೆಯೊಂದಿಗೆ ಸಮಾಪ್ತಿಯಾಯಿತು. ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಗನ್ನಾಥ ಬಂಗೇರ, ಟ್ರಸ್ಟಿಗಳಾದ ಡಾ.ಯಶೋಧರ ಬಂಗೇರ, ಚಂದ್ರಶೇಖರ ಪೂಜಾರಿ, ನವೀನ್ ಬಂಗೇರ, ಹೇಮಾ ದಾಮೋದರ ನಿಸರ್ಗ, ಜಾನಕಿ ಕೇಶವ, ಶಾರದಾ ಕೃಷ್ಣ ಕೆದೆ, ಪ್ರಶಾಂತ ಪೂಜಾರಿ, ಕೀರ್ತಿ ಬಂಗೇರ ಪೂಜಾ ಉಪಸ್ಥಿತರಿದ್ದರು.
ಆಡಳಿತ ಮೊಕ್ತೇಸರ ಪೀತಾಂಬರ ಹೆರಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಭಗೀರಥ ಜಿ.ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ದಿನೇಶ ಪಿದಮಲೆ ಲೆಕ್ಕಪತ್ರ ಮಂಡಿಸಿದರು. ಸೋಮನಾಥ ಬಂಗೇರ ವಂದಿಸಿದರು.