

ವಿಜಯವಾಣಿ ಸುದ್ದಿಜಾಲ ಉಪ್ಪಳ
ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಕಟ್ಟಡ ಕಳೆದ 50 ವರ್ಷಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ ಎಂದು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಹೇಳಿದರು.
26,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿರುವ, ಆಸ್ಪತ್ರೆಗೆ ಕಿಫ್ಬಿ ನಿಧಿಯಿಂದ 17.47 ಕೋಟಿ ರೂ. ವೆಚ್ಚದಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ಸೌಲಭ್ಯಗಳ ಹೊಸ ಕಟ್ಟಡದ ನಿರ್ಮಾಣಕ್ಕೆ ಆನ್‌ಲೈನ್ ಮೂಲಕ ಚಾಲನೆ ನೀಡಿ ಮಾತನಾಡಿದರು.
ಈ ಸರ್ಕಾರ ಅಧಿಕಾರಕ್ಕೆ ಬಂದಾಗ ಎರಡು ಸೂಪರ್ ಸ್ಪೆಷಾಲಿಟಿ ವಿಭಾಗ, ಅವುಗಳಿಗೆ ಪ್ರತ್ಯೇಕ ಹುದ್ದೆ, ಡಯಾಲಿಸಿಸ್ ಘಟಕ, ಕ್ಯಾತ್ ಲ್ಯಾಬ್ ಸೌಲಭ್ಯ, ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಪರಿವರ್ತಿಸುವ ಕೆಲಸ ನಡೆದಿದೆ. ಸಾರ್ವಜನಿಕ ಆರೋಗ್ಯ ಕೇಂದ್ರಗಳ ಉದ್ಘಾಟನೆ ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ ಎಂದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ವರದಿ ಮಂಡಿಸಿದರು. ಮಂಗಲ್ಪಾಡಿ ಗ್ರಾಪಂ ಅಧ್ಯಕ್ಷೆ ರುಬೀನಾ ನೌಲ್, ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲೆವಿನಾ ಮೊಂತೆರೊ, ಜಿಪಂ ಸದಸ್ಯ ಗೋಲ್ಡನ್ ಅಬ್ದುಲ್ ರಹಮಾನ್, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ಕೆ.ಮುಹಮ್ಮದ್ ಹನ್ೀ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಶಂಸೀನಾ, ಮಂಗಲ್ಪಾಡಿ ಗ್ರಾಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ರಾಧಾಕೃಷ್ಣ, ಪಂಚಾಯಿತಿ ಸದಸ್ಯರಾದ ಕೈರುನ್ನೀಸಾ ಉಮರ್, ಟಿ.ಎ.ಶರ್ೀ, ಸುಧಾ, ಅಶೋಕ, ರಶೀದಾ ಹನ್ೀ, ಅಜೀಜ್ ಮರಿಕೆ, ಸಾದಿಕ್ ಚೆರುಗೋಳಿ, ಾರೂಕ್ ಶಿರಿಯ, ರಾಘವ ಚೇರಾಲ್, ಅಶ್ರ್ ಪಚ್ಲಂಪಾರೆ, ಅಹ್ಮದಲಿ ಕುಂಬಳೆ, ತಾಜುದ್ದೀನ್ ಮೊಗ್ರಾಲ್, ಪ್ರಿಜು ಕೆ., ಕೆ.ಎ್.ಇಕ್ಬಾಲ್, ಉಮ್ಮರ್ ಅಪೋಲೊ, ಕೆ.ಅಶೋಕ್ ಮಾತನಾಡಿದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಸ್ವಾಗತಿಸಿದರು.
ಕೆಲಸ ಪೂರ್ಣಗೊಳಿಸುವಂತೆ ಒಪ್ಪಂದ
ಹೊಸದಾಗಿ ನಿರ್ಮಿಸಲಾದ ಎರಡು ಅಂತಸ್ತಿನ ಕಟ್ಟಡವು ಒಪಿ, ಕ್ಯಾಷಿಯರ್, ಮೈನರ್ ಒಟಿ, ಎಕ್ಸ್-ರೇ, ಅಲ್ಟ್ರಾಸೌಂಡ್, ಸಿಟಿ ಸ್ಕಾೃನ್, ಾರ್ಮಸಿ, ಎರಡು ಒಪಿ ಸಮಾಲೋಚನಾ ಕೊಠಡಿ, ಸಿಬ್ಬಂದಿ ಕೊಠಡಿ, ತನಿಖಾ, ಸ್ವಾಗತ ಕೌಂಟರ್, ಕಾಯುವ ಕೇಂದ್ರ, ವಿದ್ಯುತ್ ಕೊಠಡಿ, ಪೊಲೀಸ್ ಸಹಾಯವಾಣಿ, ಶೌಚಗೃಹದ ಸೌಲಭ್ಯ ಹೊಂದಿರಲಿದೆ. 15 ತಿಂಗಳೊಳಗೆ ಕೆಲಸ ಪೂರ್ಣಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.