'ದಯವಿಟ್ಟು ನಮ್ಮನ್ನ ಬಿಟ್ಟುಬಿಡಿ..' ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರ ಗೋಳಾಟ

atrwet
Published on

ಮಂಡ್ಯ: ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಹೋಂ ಐಸೋಲೇಷನ್​ಗೆ ಸರ್ಕಾರ ಅನುಮತಿ ನಿರಾಕರಿಸಿದೆ. ಗ್ರಾಮೀಣ ಭಾಗದ ಪ್ರತಿ ಸೋಂಕಿತರೂ ಕೋವಿಡ್​ ಕೇರ್​ ಸೆಂಟರ್​ನಲ್ಲೇ ಇರಬೇಕು ಎನ್ನಲಾಗಿದೆ. ಆದರೆ ಅಂತಹ ಕೇಂದ್ರಗಳಲ್ಲಿ ಸೌಲಭ್ಯ ಕಡಿಮೆಯಿರುವುದರಿಂದಾಗಿ ಸೋಂಕಿತರು ನಮ್ಮನ್ನು ಬಿಟ್ಟುಬಿಡಿ ಎಂದು ಗೋಳಾಡುವ ಪರಿಸ್ಥಿತಿ ಎದುರಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಬದರಿಕೊಪ್ಪಲು ಗ್ರಾಮದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಇಂತಹದ್ದೇ ಪರಿಸ್ಥಿತಿ ಉಂಟಾಗಿದೆ. ಅಲ್ಲಿರುವ ಸೋಂಕಿತರು ನಮ್ಮನ್ನು ಇಲ್ಲಿಂದ ಮನೆಗೆ ಕಳುಹಿಸಿ ಎಂದು ಕೇಂದ್ರದ ಬಾಗಿಲಲ್ಲಿ ನಿಂತು ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾರಂಭಿಸಿದ್ದಾರೆ.

ಎಲ್ಲಾ ಸವಲತ್ತು ಕೊಡ್ತಿವಿ ಅಂತ ಕರೆತಂದು ನರಕದಲ್ಲಿ ಕೂಡಿ ಹಾಕಿದ್ದಾರೆ. ಆದರೆ ಇಲ್ಲಿ ಏನೂ ಇಲ್ಲ. ಮಗು 3 ದಿನಗಳಿಂದ ಕೆಮ್ಮಿನಿಂದ ನರಳುತ್ತಿದೆ. ಕೆಮ್ಮಿ‌ನ ಔಷಧಿ ಕೇಳಿದರೂ ಕೊಡುತ್ತಿಲ್ಲ. ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಇಲ್ಲಿಗಿಂತ ಮನೆಯಲ್ಲೆ ನಾವು ಬಿಸಿಯೂಟ ಮಾಡಿಕೊಂಡು ಗುಣಮುಖರಾಗುತ್ತೇವೆ. ಕುಡಿಯುವ ನೀರು ಮುಗಿದು ಎರಡು ದಿನ ಕಳೆದಿದೆ. ಯಾವುದರ ಬಗ್ಗೆಯೂ ಗಮನವೇ ಕೊಡುತ್ತಿಲ್ಲ. ಹಾಗಾಗಿ ನಮಗೆ ಮನೆಗೆ ಹೋಗುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಸೋಂಕಿತರು ಕೇಳಿಕೊಳ್ಳಲಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net