ಸಮಗ್ರ ಜೀರ್ಣೋದ್ಧಾರದೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಯಲ್ಲಿ ನಾಡೂರು

New Project (36)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಹದಿಮೂರು ಶತವಾನಗಳಿಗೂ ಮಿಕ್ಕಿದ ಇತಿಹಾಸವಿರುವ ಮೂಡುಬಿದಿರೆಯ ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನ, ಕಾರಣಿಕ ನಾಗಬ್ರಹ್ಮರ ಸನ್ನಿಧಿ, ತುಳುನಾಡಿನ ಬ್ರಹ್ಮ ಬಲಾಂಡಿ ದೈವದ ಮೂಲದ ನಾಡುವಿನ ವಾಯಸ್ಥಾನ ಇದೀಗ ಸಮಗ್ರ ಜೀರ್ಣೋದ್ಧಾರದ ಹಿನ್ನೆಲೆ ನವನಿರ್ಮಾಣವಾಗುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೆ ಭರದಿಂದ ಸಜ್ಜುಗೊಳ್ಳುತ್ತಿದೆ.

ಸಂಪೂರ್ಣ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ, ಸುತ್ತು ಪೌಳಿ, ಪರಿವಾರ ದೇವರು, ನಾಗ ಬನದ ಜೀರ್ಣೋದ್ಧಾರ, ಗಣಪತಿ, ನಾಡು, ದೈವದ ಗುಡಿಗಳ ಸಹಿತ ಕೆರೆ, ಬಾವಿ, ಗೋಪುರ, ಆವರಣ ಹೀಗೆ ಒಟ್ಟು 5 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗಳು ಭಜಕರು ಮತ್ತು ದಾನಿಗಳ ನೆರವಿನಿಂದ ನಡೆದಿವೆ.

ಮೂಡುಬಿದಿರೆ ಪೇಟೆ ಪ್ರಾಂತ್ಯ ಗ್ರಾಮದಲ್ಲಿನ ಲಾಡಿಯ ಪುರಾತನ ನಾಗ ಸಾನ್ನಿಧ್ಯ, ಅಪರೂಪ ಎನ್ನಲಾಗುವ ಚತುರ್ಮುಖ ಬ್ರಹ್ಮ ದೇವಸ್ಥಾನ, ದೈವ ಬಲಾಂಡಿಯ ಮೂಲ ನಾಡು ಮಾಯವಾದ ಸ್ಥಾನ ಎಂಬ ಕಾರಣಕ್ಕೆ ನಾಡೂರು ಎಂದು ಹೆಸರಾಗಿರುವ ಈ ಧಾರ್ಮಿಕ ಪರಿಸರಕ್ಕೆ 1,300 ವರ್ಷಗಳ ಇತಿಹಾಸವಿದೆ. ಧನ್ವಂತರಿ ಸ್ವರೂಪದ ಬ್ರಹ್ಮ ಮೂರ್ತಿಯ ಕಾರಣಿಕದಿಂದಾಗಿ ವಿವಾಹ ಭಾಗ್ಯ, ಸಂತಾನ ಭಾಗ್ಯ ಮಾತ್ರವಲ್ಲ ಚರ್ಮರೋಗದಿಂದ ಮುಕ್ತರಾಗಿ ಆರೋಗ್ಯ ಭಾಗ್ಯಕ್ಕೆ ಈ ಸನ್ನಿಧಿ ಹೆಸರಾಗಿದೆ.

ದೇಶದಲ್ಲೇ ಅಪರೂಪ ಎನ್ನಲಾಗುವ ಚತುರ್ಮುಖ ಬ್ರಹ್ಮನ ದೇವಸ್ಥಾನ, ಪುರಾತನ ನಾಗ ಬ್ರಹ್ಮ ಬನ, ದೈವ ಬ್ರಹ್ಮ ಬಲಾಂಡಿಯ ಉಗಮ ಸ್ಥಾನ. ಈ ಪವಿತ್ರ ತಾಣದ ಪೂರ್ವ ಭಾಗದ ಅಂಗಜಾಲ ಬರ್ಕೆಯಲ್ಲಿ ಉಗಮ ಸ್ಥಾನ ಹೊಂದಿರುವ ಶಾಂಭವಿ ನದಿ ಈ ದೇವಸ್ಥಾನದ ಹತ್ತಿರವೇ ಹರಿಯುತ್ತಿದ್ದು, ಚರ್ಮ ರೋಗಾದಿ ವ್ಯಾಧಿಗಳ ನಿವಾರಣೆಯ ಖ್ಯಾತಿ ಈ ಲಾಡಿ ದೇವಸ್ಥಾನದ ಪರಿಸರದ ವಿಶೇಷ. ಬನ್ನಾಯ ಎಂಬ ಅರಸರ ಬಂಟನಾದ ಸದರ್ನಾಡು ಇದೇ ಲಾಡಿ ಕ್ಷೇತ್ರ ದಾಟಿ ಹೋಗುವ ಸಂದರ್ಭದಲ್ಲಿ ಅರಸ ಕೈಮುಗಿದು ಬಂದರೂ ಕುದುರೆ ಇಳಿಯದೇ ಹೋದಾಗ ದೇವರು ಆತನನ್ನು ಕುದುರೆಯೊಂದಿಗೆ ಶಿಲೆ ವಾಡಿದ ಸ್ಥಳ ಇಂದಿಗೂ ಕುದುರೆ ಗುಂಡಿಯಾಗಿ ಪ್ರಸಿದ್ಧ.

ಮೂಡುಬಿದಿರೆಯ ವಾರ್ಪಾಡಿ, ಪ್ರಾಂತ್ಯ, ಹೊಸಬೆಟ್ಟು, ವಾರೂರು, ಬೆಳುವಾಯಿ, ಗ್ರಾಮಸ್ಥರಿಗೆ ಈ ದೇವಸ್ಥಾನವೇ ಮೂಲ. 1964ರಲ್ಲಿ ಕಲ್ಲು ಹೆಂಚಿನ ನಿರ್ವಾಣ ಅಭಿವೃದ್ಧಿ ಕಂಡಿದ್ದ ದೇಗುಲ ಕಳೆದ 2022ರ ಆಗಸ್ಟ್‌ನಲ್ಲಿ ಅಷ್ಟಮಂಗಲ ಪ್ರಶ್ನೆಯ ಬಳಿಕ ಜೀರ್ಣೋದ್ಧಾರಕ್ಕೆ ನಿರ್ಧರಿಸಲಾಗಿತ್ತು. ಅತ್ಯಂತ ಪ್ರಾಚೀನ ಎನ್ನಲಾಗುವ ಅಪರೂಪದ ನಾಗ ಶಿಲಾಮೂರ್ತಿಗಳಿರುವ ನಾಗ ಬನ ಇಲ್ಲಿನ ವಿಶೇಷ. ದೇಗುಲದ ನವೀಕರಣ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ನಾಗ ಸನ್ನಿಧಿಯ ಸ್ಥಳವೂ ದಾನಿಗಳಿಂದ ಸಹಾಯ ದೊರೆತಲ್ಲಿ ಅಭಿವೃದ್ಧಿಪಡಿಸುವ ನೀಲಿನಕಾಶೆ ಸಿದ್ಧವಾಗಿದೆ.

ಸಮಗ್ರ ಜೀರ್ಣೋದ್ಧಾರ

ಶಾಸಕ ಉಮಾನಾಥ ಕೋಟ್ಯಾನ್, ವಾಜಿ ಸಚಿವ ಕೆ.ಅಭಯಚಂದ್ರ ಜೈನ್ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿ, ಅನಂತಕೃಷ್ಣ ರಾವ್ ಅಧ್ಯಕ್ಷತೆಯ ಕ್ರಿಯಾ ಕಾರ್ಯಯೋಜನೆಯಿಂದ ದೇಗುಲದ ಸಮಗ್ರ ನವೀಕರಣ, ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ಸಮಿತಿಗಳು ದೇಗುಲಕ್ಕೆ ಸಂಬಂಧಿಸಿದ ಗ್ರಾಮಸ್ಥರ ಉದಾರ ಕೊಡುಗೆಗಳ ನಿರೀಕ್ಷೆಯಲ್ಲಿವೆ. ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ ನೇತೃತ್ವದಲ್ಲಿ ಪದ್ಮನಾಭ ಶಿಲ್ಪಿ ಬಳಗವು ಇಲ್ಲಿನ ಒಟ್ಟು 5 ಸಾವಿರ ಅಡಿ ವಿಸ್ತಾರದಲ್ಲಿನ ಸಂಪೂರ್ಣ ಶಿಲಾಮಯ ಛಾವಣಿಯ ವಿಶಿಷ್ಟ ಗುಡಿ ಗೋಪುರಗಳನ್ನು ರೂಪಿಸುವಲ್ಲಿ ತೊಡಗಿಕೊಂಡಿದೆ.

2025ರ ಫೆ.12ರಿಂದ ಬ್ರಹ್ಮಕಲಶ

ಷಷ್ಠಿ ಮಹೋತ್ಸವದ ದಿನ ಬ್ರಹ್ಮಕಲಶೋತ್ಸವ ಸಂಭ್ರಮ ಫೆ.12ರಿಂದ 16ರವರೆಗೆ ನಡೆಯಲಿರುವ ಕುರಿತು ದೇವಾಲಯದಲ್ಲಿ ಅಧಿಕೃತ ೋಷಣೆ ವಾಡಲಾಗಿದೆ. ಶ್ರೀ ಮುರಳೀಧರ ತಂತ್ರಿ ಎಡಪದವು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅನಂತಕೃಷ್ಣ ರಾವ್, ಸಹಿತ ಪದಾಧಿಕಾರಿಗಳು, ಪುರಸಭಾ ಸದಸ್ಯ ಎಚ್.ಸುರೇಶ್ ಪ್ರಭು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net