ವಿಶ್ವಕ್ಕೆ ಕೊಡುಗೆಯಾಗಿರುವ ಯೋಗ ವಿಜ್ಞಾನ

ಹುಣಸೂರಿನ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಭಾಗವಹಿಸಿದ್ದರು. ಮುಖ್ಯಶಿಕ್ಷಕ ಸುರೇಶ್, ಬಿಆರ್‌ಸಿ ಹೇಮಲತಾ, ಶಿಕ್ಷಕ ನರಸಿಂಹ, ದೈಹಿಕ ಶಿಕ್ಷಣ ಪರಿವೀಕ್ಷಕ ರವಿ ಇತರರಿದ್ದರು.
ಹುಣಸೂರಿನ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಭಾಗವಹಿಸಿದ್ದರು. ಮುಖ್ಯಶಿಕ್ಷಕ ಸುರೇಶ್, ಬಿಆರ್‌ಸಿ ಹೇಮಲತಾ, ಶಿಕ್ಷಕ ನರಸಿಂಹ, ದೈಹಿಕ ಶಿಕ್ಷಣ ಪರಿವೀಕ್ಷಕ ರವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Yoga science
ಹುಣಸೂರು: ಯೋಗಾಭ್ಯಾಸ ಕೇವಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಅನುಸರಿಸುವ ಕ್ರಮ ಮಾತ್ರವಲ್ಲ, ಅದೊಂದು ವಿಜ್ಞಾನ ಎಂದು ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಅಭಿಪ್ರಾಯಪಟ್ಟರು.
ನಗರದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪತಿ ರಾಕೇಶ್ ಅವರೊಂದಿಗೆ ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತೀಯ ಸಂಸ್ಕೃತಿ, ಪರಂಪರೆ ಹೊಂದಿರುವ ಯೋಗವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಲಾಗಿದೆ. ವಿಶ್ವಾದ್ಯಂತ ಯೋಗ ದಿನ ಆಚರಿಸುತ್ತಿರುವುದು ಭಾರತೀಯರಾದ ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಯೋಗ ಕೇವಲ ದೇಹ ಮತ್ತು ಮನಸುಗಳ ಸಮಸ್ಥಿತಿಯನ್ನು ಸ್ಥಾಪಿಸಲು ಪ್ರೇರೇಪಿಸುವ ಸಾಧನ ಮಾತ್ರವಲ್ಲ, ಯೋಗ ಎನ್ನುವುದು ವಿಜ್ಞಾನವಾಗಿದೆ. ಯೋಗದ ವಿವಿಧ ಭಂಗಿಗಳು ದೇಹರಚನೆಯ ಆರೋಗ್ಯವನ್ನು ಕಾಪಾಡುವಲ್ಲಿ ಹೇಗೆ ಲಾಭದಾಯಕ? ಯೋಗ ಆಚರಣೆಯಿಂದ ದೇಹದಲ್ಲಾಗುವ ರಾಸಾಯನಿಕ ಉತ್ಪನ್ನಗಳಲ್ಲಿನ ಬದಲಾವಣೆಯ ಕುರಿತು ವೈಜ್ಞಾನಿಕವಾಗಿ ವಿವರಿಸಲಾಗುತ್ತಿದೆ. ಬಾಲ್ಯದಿಂದಲೇ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರೆ ದೇಶದ ಅತ್ಯುತ್ತಮ ಆಸ್ತಿಯಾಗಿ ಹೊರಹೊಮ್ಮಲು ಸಾಧ್ಯವಿದ್ದು, ಶಿಕ್ಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಶುಭಾ, ಉಪಾಧ್ಯಕ್ಷ ಮೊಹಮ್ಮದ್ ರಫೀಕ್, ಸದಸ್ಯರಾದ ಚಲುವರಾಜ್, ಮಂಜುಳಾ, ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರವಿ, ಮುಖ್ಯಶಿಕ್ಷಕ ಎಸ್.ಸುರೇಶ್, ಡಾ.ಮಾದುಪ್ರಸಾದ್, ನರಸಿಂಹ, ಜಮರಾಮೇಗೌಡ, ಕೃಷ್ಣಮೂರ್ತಿ, ಶೋಭಾ, ರಾಣಿ, ಅನ್ನಪೂರ್ಣ, ಪ್ರಮೋದ್, ಸ್ವಾತಿ, ಪುಷ್ಪಾ, ಸಬಾ ಫಾತಿಮಾ, ಸುಶೀಲಮ್ಮ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net