ಮೈ, ಮನಸ್ಸು ನಿಯಂತ್ರಣವೇ ಯೋಗ

ಬೈಲುಕುಪ್ಪೆಯ ನಳಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಯೋಗ ದಿನ ಆಚರಿಸಲಾಯಿತು. ರಾಜೇಂದ್ರ ಗುರೂಜಿ, ಕರ್ಮ ರೆಂಪೂಜಿ, ವಿ ರಾಜೇಂದ್ರ, ಬಸವೇಗೌಡ, ರವಿಕುಮಾರ್ ಇದ್ದರು.
ಬೈಲುಕುಪ್ಪೆಯ ನಳಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಯೋಗ ದಿನ ಆಚರಿಸಲಾಯಿತು. ರಾಜೇಂದ್ರ ಗುರೂಜಿ, ಕರ್ಮ ರೆಂಪೂಜಿ, ವಿ ರಾಜೇಂದ್ರ, ಬಸವೇಗೌಡ, ರವಿಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • body and mind
ಬೈಲುಕುಪ್ಪೆ: ಮೈ ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಯೋಗ. ಆರೋಗ್ಯವಂತ ಬದುಕಿಗೆ ಇದುವೇ ಮದ್ದು ಎಂದು ರಾಜೇಂದ್ರ ಗುರೂಜಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಒಂದನೇ ಕ್ಯಾಂಪ್ ಟಿಬೆಟಿಯನ್ ಬೌದ್ಧ ನಳಂದ ವಿದ್ಯಾ ಸಂಸ್ಥೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಯೋಗ ದಿನದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ವೇಗದ ಜೀವನ ಶೈಲಿಯಲ್ಲಿ ಯೋಗವು ಯೌವ್ವನ ಭರಿತ ಬದುಕಿಗೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ತಿಳಿಸಿದರು,
ಬಿಜೆಪಿ ತಾಲೂಕು ಅಧ್ಯಕ್ಷ ವಿ.ರಾಜೇಂದ್ರ ಮಾತನಾಡಿ, ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಶರೀರಕ್ಕೆ ಆರೋಗ್ಯ ಮತ್ತು ಮಾನಸಿಕ ಒತ್ತಡ ನಿವಾರಣೆ ಸಾಧ್ಯವಾಗುತ್ತದೆ. ಪ್ರತಿದಿನ ಮುಂಜಾನೆ ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ ಎಂದರು.
ನಳಂದ ಬೌದ್ಧ ವಿದ್ಯೆ ಸಂಸ್ಥೆಯ ವ್ಯವಸ್ಥಾಪಕ ಕರ್ಮ ರೆಂಪೋಜಿ ಮಾತನಾಡಿದರು.
ಪರಿಸರವಾದಿ ಬಸವಗೌಡ, ಅವರ್ತಿ ರವಿಕುಮಾರ್, ಕೆ.ರವಿಕುಮಾರ್, ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಕರ್ಮ ಗೌತಮ್, ಕಾರ್ತಿಕ್ ಲಂಕಾ, ವಜ್ರ, ರೂಪಿ, ಶಶಿ, ರೋಜ್, ಆಗಸ್ಟ್ ,ಅರ್ಜುನ್, ಆನಂದ, ಅಜೀಶ್, ವಿಶಾಲ, ಭೌದಿ, ನಾಗಬುದ್ದೀನ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net