ಮನಃಶಾಂತಿಗೆ ಯೋಗ, ಧ್ಯಾನ ಸಹಕಾರಿ

 ನಗರದ ಊಟಿ ರಸ್ತೆಯ ಜೆಎಸ್‌ಎಸ್  ಕಾಲೇಜಿನಲ್ಲಿ ಶುಕ್ರವಾರ ಯೋಗದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಯೋಗಿನಿ, ತ್ರಿಯೋಗದ ಸಂಸ್ಥಾಪಕಿ ಡಾ.ಯೋಗಿನಿ ಕಾಳೀಜಿ ಉದ್ಘಾಟಿಸಿದರು. ಡಾ.ಸಿ.ಜಿ.ಬೆಟಸೂರಮಠ, ಡಾ.ಕೆ.ರಾಘವೇಂದ್ರ ಪೈ, ಪ್ರೊ.ಮೊರಬದ ಮಲ್ಲಿಕಾರ್ಜುನ, ಪ್ರೊ.ಬಿ.ವಿ.ಸಾಂಬಶಿವಯ್ಯ ಇದ್ದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ ಶುಕ್ರವಾರ ಯೋಗದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಯೋಗಿನಿ, ತ್ರಿಯೋಗದ ಸಂಸ್ಥಾಪಕಿ ಡಾ.ಯೋಗಿನಿ ಕಾಳೀಜಿ ಉದ್ಘಾಟಿಸಿದರು. ಡಾ.ಸಿ.ಜಿ.ಬೆಟಸೂರಮಠ, ಡಾ.ಕೆ.ರಾಘವೇಂದ್ರ ಪೈ, ಪ್ರೊ.ಮೊರಬದ ಮಲ್ಲಿಕಾರ್ಜುನ, ಪ್ರೊ.ಬಿ.ವಿ.ಸಾಂಬಶಿವಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯೋಗಿನಿ, ತ್ರಿಯೋಗದ ಸಂಸ್ಥಾಪಕಿ, ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ.ಯೋಗಿನಿ ಕಾಳೀಜಿ ಮಾಹಿತಿ
  • ಯೋಗ ಕುರಿತು ಉಪನ್ಯಾಸ
 ಮೈಸೂರು: ತಂತ್ರಜ್ಞಾನದ ಯುಗದಲ್ಲಿ ಯೋಗ ಮತ್ತು ಧ್ಯಾನದಂತಹ ಅಭ್ಯಾಸಗಳು ಮನಃಶಾಂತಿ ಹಾಗೂ ಉತ್ತಮ ಜೀವನ ನಡೆಸ ಸಹಕಾರಿ ಎಂದು ಯೋಗಿನಿ, ತ್ರಿಯೋಗದ ಸಂಸ್ಥಾಪಕಿ ಹಾಗೂ ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ.ಯೋಗಿನಿ ಕಾಳೀಜಿ ತಿಳಿಸಿದರು. 
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಯೋಗದ ಕುರಿತು ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದರು.
ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಮನಸ್ಸಿನ ವ್ಯಾಯಾಮವೂ ಆಗಿದೆ ಎಂದರು.
ಮಾನವನ ಮನಸ್ಸು ಕೋಪ, ದುರಾಸೆ, ಅಸೂಯೆ, ಬಾಂಧವ್ಯ, ಅಹಂಕಾರ ಮತ್ತು ದ್ವೇಷದಂತಹ ಆರು ಆಂತರಿಕ ಶತ್ರುಗಳಿಂದ ಪ್ರಭಾವಿತವಾಗಿರುತ್ತದೆ. ನಿಯಮಿತ ಯೋಗಾಭ್ಯಾಸವು ಈ ನಕಾರಾತ್ಮಕ ಪ್ರವೃತ್ತಿ ನಿವಾರಿಸಿ ಧೈರ್ಯ, ಸಕಾರಾತ್ಮಕತೆ, ಏಕಾಗ್ರತೆ ಹಾಗೂ ಭಾವನಾತ್ಮಕ ಸ್ಥಿರತೆ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ನಿಜವಾದ ಕಲಿಕೆ ಎಂದರೆ ಕೇವಲ ಮೆದುಳಿಗೆ ಮಾಹಿತಿ ತುಂಬುವುದಲ್ಲ. ದೇಹ, ಮನಸ್ಸು ಮತ್ತು ಆಂತರಿಕ ಚೈತನ್ಯ ಪೋಷಿಸುವುದೂ ಆಗಿದೆ. ಆರೋಗ್ಯಕರ ಮೆದುಳನ್ನು ಕಾಪಾಡಿಕೊಳ್ಳಲು ಸರಿಯಾದ ಉಸಿರಾಟ, ಶಿಸ್ತು, ಸಮತೋಲಿತ ಜೀವನ ಹಾಗೂ ಆಂತರಿಕ ಅರಿವು ಅತ್ಯಗತ್ಯವಾಗಿವೆ. ಕಲಿಕೆಯು ಜೀವಮಾನಪೂರ್ತಿ ನಡೆಯುವ ಪ್ರಕ್ರಿಯೆಯಾಗಿದ್ದು, ನಿಜವಾದ ಜ್ಞಾನವು ಶಿಕ್ಷಣ ಮತ್ತು ಆಂತರಿಕ ಸಾಕ್ಷಾತ್ಕಾರ ಎರಡರಲ್ಲಿಯೂ ಅಡಕವಾಗಿದೆ ಎಂದು ತಿಳಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ವೇದಕಾಲದಿಂದಲೂ ಯೋಗಕ್ಕೆ ಹೆಚ್ಚು ಮಹತ್ವವಿದೆ. ಅದು ಅಧ್ಯಾತ್ಮದ ಸಂಕೇತವಾಗಿದೆ. ಯೋಗದಿಂದ ಜೀವಾತ್ಮ, ಪರಾಮಾತ್ಮ ಕ್ರಿಯಾತ್ಮಕವಾಗಿರಲು ಸಹಾಯಕವಾಗಿದೆ ಎಂದರು.
21ನೇ ಶತಮಾನ ಹೆಚ್ಚು ಸಂಕೀರ್ಣ ಮತ್ತು ಸವಾಲಿನ ಕಾಲವಾಗಿದೆ. ಇದಕ್ಕೆ ಪರಿಹಾರವೆಂದರೆ ಯೋಗ ಅಭ್ಯಾಸ. ಯೋಗದಿಂದ ಸ್ವನಿಯಂತ್ರಣ, ಮನಸ್ಸಿನ ಶಾಂತಿ, ಕುಟುಂಬಗಳ ನಡುವೆ ಸಾಮರಸ್ಯ ಸಾಧಿಸಬಹುದು. ಯೋಗ ದೇಹ ಮತ್ತು ಮನಸ್ಸಿನ ನಡುವೆ ಸಮತೋಲನದ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ ಎಂದರು.
ಅಮೆರಿಕದ ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ರಾಘವೇಂದ್ರ ಪೈ ಮಾತನಾಡಿ, ಯೋಗ ಮತ್ತು ಆಯುರ್ವೇದ ಒಂದೇ ನಾಣ್ಯದ ಎರಡು ಮುಖಗಳು. ಯೋಗದ ಮುದ್ರೆಗೂ ಮನಸ್ಸಿಗೂ ಸಂಪರ್ಕವಿದೆ. ಅದನ್ನು ಸಾಧಿಸುವ ಸಾಮರ್ಥ್ಯ ಎಲ್ಲರಲ್ಲಿಯೂ ಇದೆ. ಯಾರೂ ವ್ಯರ್ಥರಲ್ಲ. ಅದಕ್ಕೆ ಕ್ರಮವಾದ ಮತ್ತು ನಿರಂತರವಾದ ಅಭ್ಯಾಸ ಬೇಕು. ಯೋಗದಿಂದ ಪ್ರತಿಕ್ಷಣ ಆನಂದ ಮತ್ತು ಶಾಂತಿ ಪಡೆಯಬಹುದು. ಭಾರತೀಯ ಸಾಂಸ್ಕೃತಿಕ ಆಚಾರ ವಿಚಾರಗಳು ದೇಹದ ಆರೋಗ್ಯಕ್ಕೆ ಪರೋಕ್ಷವಾಗಿ ಸಹಾಯಕವಾಗಿವೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಎಂ. ಪ್ರಭು, ಡಾ.ರಾಜೇಂದ್ರ ಪ್ರಸಾದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net