ಬರವಣಿಗೆ ಒಂದು ಜಾತಿಗೆ ಸಿಮೀತವಾಗಿಲ್ಲ: ಮಾಜಿ ಸಂಸದ ಪ್ರತಾಪಸಿಂಹ

ಡಾ.ರಾಗೌ ಗುರುಗಳು ಮತ್ತು ಮಣಿ ಪ್ರಕಾಶನದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರತಾಪಸಿಂಹ, ಡಾ.ರಾಗೌ, ಪ್ರೊ.ಸಿ.ನಾಗಣ್ಣ, ಶ್ರೀಮಂಜುನಾಥ ಸ್ವಾಮೀಜಿ, ಎ.ಎಂ.ಖುಷಿ, ಡಾ.ಬಿ.ಎಸ್.ಸುಬ್ರಹ್ಮಣ್ಯ, ಮಂಜೇಗೌಡ ಇದ್ದರು.
ಡಾ.ರಾಗೌ ಗುರುಗಳು ಮತ್ತು ಮಣಿ ಪ್ರಕಾಶನದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರತಾಪಸಿಂಹ, ಡಾ.ರಾಗೌ, ಪ್ರೊ.ಸಿ.ನಾಗಣ್ಣ, ಶ್ರೀಮಂಜುನಾಥ ಸ್ವಾಮೀಜಿ, ಎ.ಎಂ.ಖುಷಿ, ಡಾ.ಬಿ.ಎಸ್.ಸುಬ್ರಹ್ಮಣ್ಯ, ಮಂಜೇಗೌಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲೇಖಕ ಪ್ರೊ.ಕೆ.ಬಿ.ವೆಂಕಟೇಶ್ ರಚಿತ ‘ಹೊಸ ಪಲ್ಲವ’ ಕೃತಿ ಬಿಡುಗಡೆ
  • ಪ್ರೊ.ಎಸ್.ಬಿ.ತೇಜ ರಚಿತ ‘ಬುವಿ ನೀಡಿದ ಅರಿವು’ ಕೃತಿ ಬಿಡುಗಡೆ
ಮೈಸೂರು:  ಬರವಣಿಗೆ ಯಾವುದೋ ಒಂದು ಜಾತಿಗೆ ಸಿಮೀತವಾಗಿಲ್ಲ. ಎಲ್ಲ ಜಾತಿ, ಜನಾಂಗದವರಿಗೂ ಬರವಣಿಗೆಯ ಶಕ್ತಿ ಸಿಗಲಿದೆ. ಅಂತಹ ದೊಡ್ಡ ಶಕ್ತಿ ಬರವಣಿಗೆಗೆ ಇದೆ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದರು.
ಡಾ.ರಾಗೌ ಗುರುಗಳು ಮತ್ತು ಮಣಿ ಪ್ರಕಾಶನದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕ ಪ್ರೊ.ಕೆ.ಬಿ.ವೆಂಕಟೇಶ್ ರಚಿತ ‘ಹೊಸ ಪಲ್ಲವ’ ಹಾಗೂ ಪ್ರೊ.ಎಸ್.ಬಿ.ತೇಜ ರಚಿತ ‘ಬುವಿ ನೀಡಿದ ಅರಿವು’ ಕೃತಿಗಳನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದರು.
ಜಗತ್ತಿನ ಎಲ್ಲ ಕ್ರಾಂತಿಗಳಿಗೂ ಬರವಣಿಗೆಯೇ ಪ್ರೇರಣೆ. ರಾಜಕೀಯ ಕ್ಷೇತ್ರದಲ್ಲಿ ಯಾರು ಒಳ್ಳೆಯ ರಾಜಕಾರಣಿಗಳು ಇದ್ದಾರೋ ಅವರೆಲ್ಲರೂ ಪತ್ರಕರ್ತರು ಇಲ್ಲವೇ ವಕೀಲರಾಗಿದ್ದವರು ಎಂದು ಹೇಳಿದರು.
ರಾಜಕೀಯ ಕ್ಷೇತ್ರದಲ್ಲಿ ನನಗೆ ವೇದಿಕೆ ಸೃಷ್ಟಿಸಿದ್ದು, ನನ್ನ ಬರವಣಿಗೆ. ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಆ ಮೂಲಕ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಬಾಲ್ಯದಿಂದಲೂ ರೂಢಿಸಿಕೊಂಡ ಓದುವ ಹವ್ಯಾಸ, ಪಾಲಕರು ನೀಡಿದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಈ ಮಟ್ಟಿಗೆ ಬರಲು ಕಾರಣವಾಗಿದೆ ಎಂದರು.
ವಿದ್ಯೆ ಎಂಬುದು ನಿಮ್ಮ ಕೈಯಲ್ಲಿದೆ. ಯಾವ ರೀತಿ ದುಡಿಸಿಕೊಳ್ಳುತ್ತಿರಿ, ಒಲಿಸಿಕೊಳ್ಳುತ್ತಿರಿ ಅದರಂತೆ ವಿದ್ಯೆಯು ಪರಿಶ್ರಮದಿಂದ ಒಲಿಯಲಿದೆ. ಬರವಣಿಗೆ ಎನ್ನುವುದು ವೈಯಕ್ತಿಕವಾಗಿ ಖುಷಿ ನೀಡುವುದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ ಖುಷಿ ನೀಡಲಿದೆ ಎಂದರು. 
ಮಕ್ಕಳಿಗೆ ವಿದ್ಯೆ ಕೊಟ್ಟರೆ, ಅದರ ಬಲದಿಂದ ಜೀವನ ರೂಪಿಸಿಕೊಳ್ಳುತ್ತಾರೆ. ಮಕ್ಕಳನ್ನು ಓದಿಗೆ ಹಚ್ಚಬೇಕು. ನನ್ನ ಮೂಲ ನಿಷ್ಠೆ, ಕೃತಜ್ಞತೆ ಬರವಣಿಗೆ ಮೇಲಿದೆ. ಆದ್ದರಿಂದ  ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಪ್ರೊ.ರಾಮೇಗೌಡ (ರಾಗೌ) ಮಾತನಾಡಿ, ಯಾವುದೇ ಬರಹಗಾರು ತನ್ನ ಬರವಣಿಗೆಯಲ್ಲಿ ತಮ್ಮದೇ ಆದ ಅಭಿಪ್ರಾಯ ಅಭಿವ್ಯಕ್ತಪಡಿಸುವ ಕಲೆ ರೂಢಿಸಿಕೊಳ್ಳಬೇಕು. ಮಾತ್ರವಲ್ಲ ನಿರಂತರ ಅಧ್ಯಯನ ಮತ್ತು ಶ್ರಮದಿಂದ ಹಿಡಿದ ಕೆಲಸ ಪೂರ್ಣ ಗೊಳಿಸುವ ಛಲ ತೊಡಬೇಕು ಎಂದು ತಿಳಿಸಿದರು.
ಅಮೆರಿಕೆಯ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ಪದೇ ಪದೆ ಹೇಳುತ್ತಿದ್ದ ಪ್ರಸಿದ್ಧ ಮಾತು - ಸಮಾಜ ನಮಗೇನು ಕೊಟ್ಟಿದೆ ಎನ್ನುವುದಲ್ಲ, ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದನ್ನು ನಾವು ಮೊದಲು ಚಿಂತಿಸಬೇಕು ಎನ್ನುವ ಮಾತನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಯುವ ಬರಹಗಾರರು ಈ ನಿಟ್ಟಿನಲ್ಲಿ ತಮ್ಮ ಚಿಂತನಾ ಧಾಟಿಯನ್ನು ಬದಲಾಯಿಸಿಕೊಂಡರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು. ಬರವಣಿಗೆ ಮೂಲಕ ತಮ್ಮನ್ನು ತಾವು ಬದಲಾಯಿಸಿಕೊಂಡು ಸಮಾಜವನ್ನೂ ಬದಲಾಯಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
 ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಮಾತನಾಡಿ, ಬರಹಗಾರ ತನ್ನ ಅಭಿವ್ಯಕ್ತಿಯನ್ನೇ ಶಕ್ತಿಯನ್ನಾಗಿ ಉಪಯೋಗಿಸಿ ಸಮಾಜಕ್ಕೆ ಸಂದೇಶ ಕೊಡಲು ಸಾಧ್ಯವಿದೆ. ಇಂದಿನ ಲೇಖಕ ವೃತ್ತಿ ಮತ್ತು ಪ್ರವೃತ್ತಿಯನ್ನು ಸರಿದೂಗಿಸಬೇಕಾದ ಸಂದಿಗ್ಧತೆ ಇದೆ. ಕುವೆಂಪು ಅವರು ಹೇಳಿದಂತೆ ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ನಾವು ಟೀಕೆಗಳಿಗೆ ಹೆದರದೆ ಕೆಲಸದತ್ತ ಶ್ರಮ ವಹಿಸಬೇಕು ಎಂದರು.
ಬಾದಾಮಿ ಸಿದ್ದರಾಮೇಶ್ವರ ಮಠದ ಶ್ರೀ ಮಂಜುನಾಥ ಸ್ವಾಮೀಜಿ, ವಿದ್ಯಾಶ್ರಮ ಪದವಿ ಕಾಲೇಜು ಪ್ರಾಂಶುಪಾಲೆ ಎ.ಎಂ.ಖುಷಿ, ಹಿರಿಯ ಪ್ರಾಧ್ಯಾಪಕ ಡಾ.ಬಿ.ಎಸ್.ಸುಬ್ರಹ್ಮಣ್ಯ, ಮಣಿ ಪ್ರಕಾಶನದ ಮಂಜೇಗೌಡ ಇದ್ದರು.
==========
* ಫೋಟೋ ಇದೆ----ಸೆಲೆಕ್ಟ್----3
ಡಾ.ರಾಗೌ ಗುರುಗಳು ಮತ್ತು ಮಣಿ ಪ್ರಕಾಶನದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರತಾಪಸಿಂಹ, ಡಾ.ರಾಗೌ, ಪ್ರೊ.ಸಿ.ನಾಗಣ್ಣ, ಶ್ರೀಮಂಜುನಾಥ ಸ್ವಾಮೀಜಿ, ಎ.ಎಂ.ಖುಷಿ, ಡಾ.ಬಿ.ಎಸ್.ಸುಬ್ರಹ್ಮಣ್ಯ, ಮಂಜೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net