ಪ್ರತಿ ಹಳ್ಳಿಯಲ್ಲೂ ಹನುಮನನ್ನು ಆರಾಧಿಸಿ

ಹುಣಸೂರು ತಾಲೂಕಿನ ಹರವೆಯಲ್ಲಿ ಆಯೋಜಿಸಿದ್ದ ಹನುಮ ಜಯಂತಿ ಮೆರವಣಿಗೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಗಣ್ಯರು ಭಾಗವಹಿಸಿದ್ದರು. ಅನಿಲ್‌ಕುಮಾರ್.ವಿ.ಎನ್.ದಾಸ್, ಹರವೆ ಶ್ರೀಧರ್, ಚರಣ, ವಸಂತ ಇತರರಿದ್ದರು.
ಹುಣಸೂರು ತಾಲೂಕಿನ ಹರವೆಯಲ್ಲಿ ಆಯೋಜಿಸಿದ್ದ ಹನುಮ ಜಯಂತಿ ಮೆರವಣಿಗೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಗಣ್ಯರು ಭಾಗವಹಿಸಿದ್ದರು. ಅನಿಲ್‌ಕುಮಾರ್.ವಿ.ಎನ್.ದಾಸ್, ಹರವೆ ಶ್ರೀಧರ್, ಚರಣ, ವಸಂತ ಇತರರಿದ್ದರು.
Published on

ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ

ಹುಣಸೂರು: ತಾಲೂಕಿನ ಹರವೆ ಗ್ರಾಮದಲ್ಲಿ ಅಂಜನಿಪುತ್ರ ಯುವಕರ ಸೇವಾ ಸಮಿತಿ ವತಿಯಿಂದ 11ನೇ ವರ್ಷದ ಹನುಮದ್ ವ್ರತ ಉತ್ಸವವು ಭಾನುವಾರ ಸಂಭ್ರಮ ಸಡಗರದಿಂದ ನೆರವೇರಿತು.
ಹರವೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಆಚರಿಸಿದ ಹನುಮ ಜಯಂತಿ ಪ್ರಯುಕ್ತ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ವಿಶೇಷ ಪೂಜೆ ಆಯೋಜಿಸಿದ್ದರು. ನಂತರ ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ವೀರಾಂಜನೇಯ ಹಾಗೂ ಶ್ರೀರಾಮ, ಲಕ್ಷ್ಮಣರ ಉತ್ಸವ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಗಾರಿ, ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಿದರು. ನಗಾರಿ ಸದ್ದಿಗೆ ಯುವ ಪಡೆ ಕುಣಿದು ಕುಪ್ಪಳಿಸಿದರು.
ಉತ್ಸವದಲ್ಲಿ ಭಾಗಿಯಾಗಿದ್ದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ಪ್ರತಿ ಹಳ್ಳಿಯಲ್ಲೂ ಎಲ್ಲರೂ ಒಗ್ಗೂಡಿ ಶಕ್ತಿದೇವತೆ ಹನುಮಂತನ ಆರಾಧಿಸುವ ಮೂಲಕ ಸಮೃದ್ಧಿ, ಶಾಂತಿ ನೆಲೆಸಲೆಂದು ಆಶಿಸಿ, ಪ್ರತಿ ಹಳ್ಳಿಹಳ್ಳಿಯಲ್ಲೂ ಹನುಮ, ಗಣೇಶನನ್ನು ಒಗ್ಗಟ್ಟಾಗಿ ಆರಾಧಿಸಲು ಮುಂದಾಗಬೇಕು. ಹರವೆಯಿಂದಲೇ ಈ ಬಗ್ಗೆ ಪ್ರಚಾರ ಕಾರ್ಯ ನಡೆಸುವಂತೆ ಕರೆ ನೀಡಿದರು.
ಮುಖಂಡ ಹರವೆ ಶ್ರೀಧರ್, ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಸಂಜಯ್, ಹನುಮಂತೋತ್ಸವ ಸಮಿತಿಯ ಕಾರ್ತಿಕ್, ಶಿವರಾಜು, ಗಣೇಶ್,ರಾಘವೇಂದ್ರ, ಅಶೋಕ್, ರವಿ, ಚಂದ್ರು, ಹರೀಶ, ಚರಣ್, ವಸಂತ, ಮುಖಂಡರಾದ ರಂಜನ್, ಪ್ರಜ್ವಲ್, ಹುಣಸೂರು ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಕಾರ್ಯದರ್ಶಿ ಅನಿಲ್‌ಕುಮಾರ್, ಉಪಾಧ್ಯಕ್ಷ ಗಿರೀಶ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳವರು ಸೇರಿ ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net