ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ವೈ.ಟಿ. ಕೃಷ್ಣೇಗೌಡ, ಪ್ರಾಚಾರ್ಯರು, ಎಂಐಟಿ ತಾಂಡಾವಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಎಚ್.ಕೆ. ಚೇತನ, ಸಂಯುಕ್ತ ಕಾರ್ಯದರ್ಶಿ, ಮಹಾರಾಜ ಎಜುಕೇಶನ್ ಟ್ರಸ್ಟ್®, ಮೈಸೂರು ಅವರು ಉಪಸ್ಥಿತರಿದ್ದು, ತಮ್ಮ ಸ್ವಾಗತ ಭಾಷಣ ಮೂಲಕ ಅತಿಥಿಗಳಾದ ಶ್ರೀ ನಾಗರಾಜ ಗರ್ಗೇಶ್ವರಿ, ಅಧ್ಯಕ್ಷರು ಮತ್ತು ನಿರ್ದೇಶಕರು, ಆಟೊಮೋಟಿವ್ ಆಕ್ಸಲ್ಸ್ ಲಿಮಿಟೆಡ್, ಮೈಸೂರು ಹಾಗೂ ಡಾ. ಜಯ ಭರತೀಶ ಸಿಂಹ, ಚೀಫ್ AI ಆಫೀಸರ್, ಇವರುಗಳನ್ನು ಸಭಿಕರಿಗೆ ಪರಿಚಯಿಸಿದರು.