ಸಮಾಜದ ಅಭಿವೃದ್ಧಿಗೂ ಮಹಿಳೆ ಮಹತ್ವದ ಕೊಡುಗೆ

ಕುವೆಂಪುನಗರದ ಲೇಖನ ಪಾರ್ಟಿ ಹಾಲ್‌ನಲ್ಲಿ ಗುರುವಾರ ಮಹಿಳಾ ಉದ್ಯಮಿಗಳಿಗಾಗಿ ಆಯೋಜಿಸಿದ್ದ ನೇಗಿಲ ಸಂತೆಯನ್ನು ಗಣ್ಯರು ಉದ್ಘಾಟಿಸಿದರು. ಸ.ನ.ಗಾಯತ್ರಿ, ಪ್ರೇಮಾ ಶಂಕರೇಗೌಡ, ಲಕ್ಷ್ಮೀ, ಎಸ್.ಎಂ.ಸುವರ್ಣಾ, ಕೆ.ಕೆ.ಅನಿತಾ, ಅನಿತಾ ಹೇಮಂತ್, ಬಿ.ಪಿ.ಉಷಾರಾಣಿ ಇತರರಿದ್ದರು.
ಕುವೆಂಪುನಗರದ ಲೇಖನ ಪಾರ್ಟಿ ಹಾಲ್‌ನಲ್ಲಿ ಗುರುವಾರ ಮಹಿಳಾ ಉದ್ಯಮಿಗಳಿಗಾಗಿ ಆಯೋಜಿಸಿದ್ದ ನೇಗಿಲ ಸಂತೆಯನ್ನು ಗಣ್ಯರು ಉದ್ಘಾಟಿಸಿದರು. ಸ.ನ.ಗಾಯತ್ರಿ, ಪ್ರೇಮಾ ಶಂಕರೇಗೌಡ, ಲಕ್ಷ್ಮೀ, ಎಸ್.ಎಂ.ಸುವರ್ಣಾ, ಕೆ.ಕೆ.ಅನಿತಾ, ಅನಿತಾ ಹೇಮಂತ್, ಬಿ.ಪಿ.ಉಷಾರಾಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಂಶುಪಾಲೆ ಸ.ನ.ಗಾಯತ್ರಿ ಅಭಿಮತ

ಮಹಿಳೆಯರು ಕುಟುಂಬದ ಏಳಿಗೆಯ ಜತೆಗೆ ಸಮಾಜದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಸ.ನ.ಗಾಯತ್ರಿ ಹೇಳಿದರು.

ಕುವೆಂಪುನಗರದ ಲೇಖನ ಪಾರ್ಟಿ ಹಾಲ್‌ನಲ್ಲಿ ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಚುಂಚ ಶ್ರೀ ಗೌಡತಿಯರ ಬಳಗ, ಭೈರವಿ ಗೌಡತಿಯರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಮಹಿಳಾ ಉದ್ಯಮಿಗಳಿಗಾಗಿ ಆಯೋಜಿಸಿದ್ದ ನೇಗಿಲ ಸಂತೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಒಗ್ಗಟ್ಟಿನಿಂದ ಯಾವುದೇ ಸಾಧನೆ ಸಾಧ್ಯ ಎಂಬುದನ್ನು ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಸಾಬೀತುಪಡಿಸಿದೆ. ಇಂತಹ ಉದ್ಯಮಶೀಲತಾ ಚಟುವಟಿಕೆಯನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಸಂತೆಯಲ್ಲಿ ಆಭರಣಗಳು, ತಿಂಡಿ-ತಿನಿಸು, ಚಿತ್ರಕಲೆ, ಕರಕುಶಲ ವಸ್ತುಗಳು, ಸಾವಯವ ಎಣ್ಣೆಗಳು ಹಾಗೂ ವಿವಿಧ ಬಗೆಯ ಹಣ್ಣುಗಳ ಮಳಿಗೆಗಳು ಸೇರಿದಂತೆ 66 ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ನಡೆಸಿದರು.
ನಗರಪಾಲಿಕೆ ಮಾಜಿ ಸದಸ್ಯೆ ಪ್ರೇಮಾ ಶಂಕರೇಗೌಡ, ಮುಡಾ ಮಾಜಿ ಸದಸ್ಯೆ ಲಕ್ಷ್ಮೀ, ಸಂಘದ ಅಧ್ಯಕ್ಷೆ ಎಸ್.ಎಂ.ಸುವರ್ಣ, ಉಪಾಧ್ಯಕ್ಷೆ ಕೆ.ಕೆ.ಅನಿತಾ, ಪ್ರಧಾನ ಕಾರ್ಯದರ್ಶಿ ಅನಿತಾ ಹೇಮಂತ್, ಗೌರವಾಧ್ಯಕ್ಷೆ ಬಿ.ಪಿ.ಉಷಾರಾಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net