ನಗರದ ಸಿಗ್ಮಾ ಆಸ್ಪತ್ರೆಯಲ್ಲಿ ಮಹಿಳೆಯರ ಆರೋಗ್ಯ ಶಿಬಿರ ನೆರವೇರಿತು. ಡಾ.ಲೀಲಾವತಿ, ಡಾ.ತೇಜಸ್ವಿನಿ, ಡಾ.ರಾಜೇಶ್ವರಿ ಮಾದಪ್ಪ, ಎಸ್.ಜ್ಞಾನಶಂಕರ್, ಡಾ.ಶರತ್‌ಚಂದ್ರ, ಡಾ.ಕೆ.ಎಂ.ಮಾದಪ್ಪ, ಡಾ.ದಿಲೀಪ್, ಡಾ.ರಾಕೇಶ್ ರಾಜೇ ಅರಸ್, ಡಾ.ನಯನಾ ಇತರರಿದ್ದರು.
ಮೈಸೂರು: ನಗರದ ಸಿಗ್ಮಾ ಆಸ್ಪತ್ರೆಯಲ್ಲಿ 3 ದಿನಗಳವರೆಗೆ ಆಯೋಜಿಸಿದ್ದ ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಯಿತು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ತಪಾಸಣೆಗೊಳಗಾಗಿ ಗರ್ಭಕೋಶ, ಗರ್ಭಕಂಠ, ಸ್ತನದಲ್ಲಿ ಗಂಟು, ಮುಟ್ಟಿನ ತೊಂದರೆ ಇನ್ನಿತರ ಸಮಸ್ಯೆಗಳಿಗೆ ಸಲಹೆ ಪಡೆದು ನಂತರ ಉಚಿತ ಸ್ಕ್ಯಾನಿಂಗ್ ಮಾಡಿಸಿಕೊಂಡರು.
ಹಿರಿಯ ಪ್ರಸೂತಿ ತಜ್ಞೆ ಡಾ.ಲೀಲಾವತಿ ಮಾತನಾಡಿ, 3 ದಿನ ನಡೆಯುವ ಈ ಶಿಬಿರದಲ್ಲಿ ಮಹಿಳೆಯರು ಹೆಚ್ಚು ಉಪಯೋಗ ಪಡೆದುಕೊಳ್ಳಬೇಕು. ಏಕೆಂದರೆ ಹೆಣ್ಣು ಮಕ್ಕಳು ಜಾಸ್ತಿ ಜವಾಬ್ದಾರಿಗಳನ್ನು ಹೊತ್ತು ನಡೆಯುವವರು ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುವುದು ಸೂಕ್ತ ಎಂದರು.
ಸ್ತ್ರೀರೋಗ ಮತ್ತು ಪ್ರಸೂತಿ ಲ್ಯಾಪ್ರೋಸ್ಕೋಪಿಕ್ ತಜ್ಞೆ ಡಾ.ತೇಜಸ್ವಿನಿ ಮಾತನಾಡಿ, ಈ ಶಿಬಿರ ಮಹಿಳೆಯರಿಗೆಂದೇ ಮಾಡುತ್ತಿದ್ದು, ಇದರಲ್ಲಿ ಸ್ಕ್ಯಾನಿಂಗ್ ಕೂಡ ಉಚಿತವಾಗಿ ಈ ಶಿಬಿರದಲ್ಲಿ ಮಾಡುತ್ತಿದ್ದು, ಹೆಚ್ಚು ಹೆಚ್ಚು ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಲಿ ಎಂದರು.
ನಿರ್ದೇಶಕಿ ಹಾಗೂ ಹಿರಿಯ ಮಕ್ಕಳ ತಜ್ಞೆ ಡಾ.ರಾಜೇಶ್ವರಿ ಮಾದಪ್ಪ, ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್, ಶಸ್ತ್ರ ತಜ್ಞ ಡಾ.ಶರತ್‌ಚಂದ್ರ ಮಾತನಾಡಿದರು. ಸ್ಥಾಪಕ ಸದಸ್ಯ ಮತ್ತು ಹಿರಿಯ ಕಿಡ್ನಿ ಕಸಿತಜ್ಞ ಡಾ.ಕೆ.ಎಂ.ಮಾದಪ್ಪ, ವೈದ್ಯರಾದ ಡಾ.ದಿಲೀಪ್, ಡಾ.ರಾಕೇಶ್ ರಾಜೇ ಅರಸ್, ಡಾ.ನಯನಾ ಇತರರಿದ್ದರು.