ಮೈಸೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

ಮೈಸೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಮೈಸೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
Published on
ಮೈಸೂರು: ರಾಜ್ಯ ವೈಚಾರಿಕ ಚಿಂತಕರ ವೇದಿಕೆ ವತಿಯಿಂದ ನಗರದ ಶ್ರೀರಾಂಪುರದ ಕ್ರೈಸ್ಟ್ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಡಾ.ಬಿ.ಟಿ. ಬಾಣೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಫಾದರ್ ಜಿಂಟೋ ಜೋಸ್ ಅಧ್ಯಕ್ಷತೆ ವಹಿಸಿದ್ದರು. ಸಾಧಕರನ್ನು ನಗರಪಾಲಿಕೆ ಉಪ ಆಯುಕ್ತೆ ಪ್ರತಿಭಾ ಚಂದ್ರಶೇಖರ್ ಸನ್ಮಾನಿಸಿದರು. ವೇದಿಕೆಯ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವೇದರಾಜ್ ಕೂರಗಲ್,ವೇದವ್ಯಾಸ ಸೇವಾ ಟ್ರಸ್ಟ್ ಅಧ್ಯಕ್ಷೆ ಪನ್ನಗ ವಿಜಯಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ಡಾ. ಕಾವೇರಿ ಪ್ರಕಾಶ್ ಮುಖ್ಯಅತಿಥಿಗಳಾಗಿದ್ದರು.
ಕೆ.ಆರ್. ಆಸ್ಪತ್ರೆಯ ಪ್ರಾಧ್ಯಾಪಕಿ ಡಾ.ಎ. ಮಂಜುಳಾದೇವಿ, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ರೇಖಾ ಅರುಣ್ ಅವರಿಗೆ ಕರ್ನಾಟಕ ಗಾನವೆದ್ಯರತ್ನ, ಗಾಯಕಿಯರಾದ ಮೈಸೂರಿನ ತೇಜಾವತಿ, ನೀತು ಉಮೇಶ್, ಜಿ.ಪಲ್ಲವಿ ಪೈ, ಆನಗಟ್ಟಿಯ ಜ್ಞಾನವೇಣಿ ಅವರಿಗೆ ಕರ್ನಾಟಕ ಗಾನಕೋಗಿಲೆ, ಶ್ರೀರಾಂಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕಮಲಮ್ಮ ನಟರಾಜ್, ಪೀಸ್ ಆಟೋ ಮತ್ತು ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷೆ ಸೌಮ್ಯಾ ಆಟೋರಾಣಿ, ಭಾರತ್ ಭೀಮ್ ಸೇನೆ ಮಹಿಳಾ ಘಟಕದ ಅಧ್ಯಕ್ಷೆ ಮಹದೇವಮ್ಮ, ಸಮಾಜ ಸೇವಕಿಯರಾದ ನಾಗರತ್ನಮ್ಮ ನಾಗರಾಜ್, ಉಷಾರಾವ್, ಪೌರ ಕಾರ್ಮಿಕರಾದ ಸುಶೀಲಾ, ಚೈತ್ರಾ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net